ಸುಳ್ಯ ಜೂನಿಯರ್ ಕಾಲೇಜಿಗೆ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಮಗ್ರ ಪ್ರಶಸ್ತಿ.

0

ವಿದ್ಯಾಬೋಧಿನಿ ಪ್ರೌಢ ಶಾಲೆ ಬಾಳಿಲದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಡ ಶಾಲಾ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಗಳಿಸಿದೆ.

ಸಂಸ್ಥೆಗೆ ಐದು ಪ್ರಥಮ ಬಹುಮಾನ, ಎರಡು ದ್ವಿತೀಯ ಬಹುಮಾನ , ಹಾಗು ಎರಡು ತೃತೀಯ ಬಹುಮಾನ ಲಭಿಸಿದೆ. ಹಾಸ್ಯದಲ್ಲಿ ಸೃಜನಾದಿತ್ಯಶೀಲ ಕೆ ಪ್ರಥಮ, ಜನಪದ ಗೀತೆ ಯಲ್ಲಿ ಸನ್ನಿಧಿ ಕೆ.ವಿ ಪ್ರಥಮ, ಕನ್ನಡ ಭಾಷಣದಲ್ಲಿ ಸೃಷ್ಟಿ ಕೆ.ಎಸ್ ಪ್ರಥಮ, ಚರ್ಚೆಯಲ್ಲಿ ಕೃತ ಸ್ವರದೀಪ್ತ ಕೆ ಪ್ರಥಮ, ಕವ್ವಾಲಿಯಲ್ಲಿ ಮಹಮ್ಮದ್ ಶಪೀಕ್, ಶ್ರೇಯಸ್, ಫಾತಿಮತ್ ಶಿಬಾ, ಶಾಝಮಾ ಕುರೈಶಾ, ಆಯಿಷತ್ ಫರ್ಝೀನಾ, ಮೇಘಾ ಜೆ ತಂಡ ಪ್ರಥಮ, ಹಿಂದಿ ಭಾಷಣದಲ್ಲಿ ಮಾನಸ ದ್ವಿತೀಯ, ಜನಪದ ನೃತ್ಯದಲ್ಲಿ ಸನ್ನಿಧಿ ಕೆ ವಿ, ಅಮೃತಾ ಎಮ್, ಶ್ರೇಯಾ ಸಿ.ಎಚ್, ಇಂಚರಾ ಸಿ ಬಿ, ಶಮಾ, ಜೀವಿಕಾ ಕೆ ತಂಡ ದ್ವಿತೀಯ, ಮಿಮಿಕ್ರಿಯಲ್ಲಿ ಅಜಿತ್ ಪ್ರಭು ತೃತೀಯ, ಸಂಸ್ಕ್ರತ ಧಾರ್ಮಿಕ ಪಠಣದಲ್ಲಿ ಶ್ರೇಯಾ ಸರಸ್ವತಿ ತೃತೀಯ ಬಹುಮಾನ ಪಡೆದಿದ್ದಾರೆ.

ಹಿಮ್ಮೇಳದಲ್ಲಿ ಗ್ರೀಷ್ಮಾ ಕೆ.ಎಸ್., ಶರಣ್ಯಾ, ಯುಕ್ತಿ ರೈ, ಬೃಂದಾ ಪ್ರಥಮ್, ದೀನ್ ರಾಜ್, ತಶ್ವಿನ್ ಸಹಕರಿಸಿದ್ದಾರೆ. ವಿಜೇತ ತಂಡಕ್ಕೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಜೇಶ್ವರಿ ಕಾಡುತೋಟ ಹಾಗು ಉಪಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ ಇವರು ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.