ಕೆವಿಜಿ ಮೇಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಮತ್ತು ಮಾಹಿತಿ ಶಿಬಿರ

0

ಸೇವಾಭಾರತಿ ಬೆಳ್ತಂಗಡಿ ತಾಲೂಕು ಇದರ ಸೇವಾಧಾಮದ ಸಹಯೋಗದಲ್ಲಿ ರೋಟರಿ ಕ್ಲಬ್ ಸುಳ್ಯ, ಲಯನ್ಸ್ ಕ್ಲಬ್ ಸುಳ್ಯ, ಕರ್ನಾಟಕ ಪ್ಲೈ ವುಡ್ ಸುಳ್ಯ, ಕೆ. ವಿ. ಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಸುಳ್ಯ, ಎ. ಪಿ. ಡಿ ಬೆಂಗಳೂರು, ಇವುಗಳ ಜಂಟಿ ಆಶ್ರಯದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ನವಂಬರ್ 16 ಬುಧವಾರ ಮತ್ತು 17 ಗುರುವಾರದಂದು ಎರಡು ದಿನಗಳ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಮತ್ತು ಮಾಹಿತಿ ಶಿಬಿರವು , ಕೆ. ವಿ. ಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಸುಳ್ಯದಲ್ಲಿ ನಡೆಯಿತು.

ಕೆ. ವಿ. ಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಸುಳ್ಯ ಇಲ್ಲಿನ ಪೆತೋಲಾಜಿ ವಿಭಾಗ ಮುಖ್ಯಸ್ಥರಾದ ಡಾ. ಸತ್ಯವತಿ ಆಳ್ವರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಸೇವಾಭಾರತಿಯ ಅಧ್ಯಕ್ಷರು ಹಾಗೂ ಸೇವಾಧಾಮದ ಸಂಸ್ಥಾಪಕರಾದ ಶ್ರೀ.ಕೆ ವಿನಾಯಕ ರಾವ್ ಇವರು ಸೇವಾಭಾರತಿ ಸೇವಾಧಾಮದ ಕಾರ್ಯಚಟುವಟಿಕೆಗಳ ಬಗ್ಗೆ ಸಾವಿಸ್ತಾರವಾದ ಪ್ರಾಸ್ತಾವಿಕ ನುಡಿಗಳನ್ನಾಡಿದರು., ಕೆ. ವಿ. ಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಸುಳ್ಯ ಇಲ್ಲಿನ ಮೂಳೆ ತಜ್ಞರಾದ ಡಾ. ರಂಗನಾಥ್ ಎನ್ ಇವರು ಬೆನ್ನುಹುರಿ ಅಪಘಾತದ ನಿರ್ವಹಣೆ ಮತ್ತು ದ್ವಿತೀಯಾಂತರ ಸಮಸ್ಯೆಗಳ ಬಗ್ಗೆ ಬಿರಾರ್ಥಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ನುಡಿದರು., ಕೆ. ವಿ. ಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಸುಳ್ಯಇದರ ಗೈನಕಾಲೋಜಿಸ್ಟ್ ವಿಭಾಗ ಸೀನಿಯರ್ ಪ್ರೊಫೆಸರ್ ಮತ್ತು ಹೆಚ್. ಓ. ಡಿಯಾದ ಡಾ. ಗೀತಾ ಡೊಪ್ಪ ರವರು ಸುಳ್ಯ ತಾಲೂಕಿನ ಎಲ್ಲಾ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಇಂತಹ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಆರೋಗ್ಯ ತಪಾಸಣೆ ಸಮಸ್ಯೆಗಳಿಗೆ ಪರಿಹಾರ ವೈದ್ಯಕೀಯ ಸಲಹೆ ಪಡೆಯ ಬೇಕು ಎಲ್ಲರೂ ಅರೋಗ್ಯವಂತರಾಗಬೇಕು ಎಂದು ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾದ ರೋಟರಿ ಕ್ಲಬ್, ಸುಳ್ಯದ ಪ್ರೆಸಿಡೆಂಟ್ ಎಲೆಕ್ಟ್ ಆದ ಆನಂದ ಖಂಡಿಗ ರವರು ಒತ್ತಡ ಗಾಯಕ್ಕೆ ಒಳಗಾದ ಬೆನ್ನುಹುರಿ ಅಪಘಾತಕ್ಕೆ ಒಳಗಾದ ಶಿಬಿರಾರ್ಥಿಗಳಿಗೆ ಮೆಡಿಕಲ್ ಕಿಟ್ ಹಸ್ತಾಂತರಿಸಿ ಸೇವಾಭಾರತಿ ಸೇವಾಧಾಮವು ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ನಿರಂತರವಾಗಿ ನೀಡುವ ಸಹಾಯ ಹಸ್ತ ಮತ್ತು ಸೌಲಭ್ಯಗಳಿಗೆ ಶ್ಲಾಘನೆ ವ್ಯಕ್ತಪಡಿಸಿ ಮುಂದೆಯೂ ರೋಟರಿ ಕ್ಲಬ್ ಸುಳ್ಯ ವತಿಯಿಂದ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು. ಡಾ ಮಗೇಶ್ವರನ್ ಪ್ರಿನ್ಸೀಪಾಲ್ ಪಿಸಿಯೋತೆರಪಿ ,ಡಾ ಸಂದೇಶ್ ರಿಜಿಸ್ಟರ್ ಕೆ ವಿ ಜಿ ಮೇಡಿಕಲ್ ಕಾಲೇಜು,ಶಿವಪ್ರಸಾದ್ ಚೀಪ್ ಹೆಚ್ ಆರ್ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು ಶಿಬಿರದಲ್ಲಿ ಅನೇಕ ಸಂಘ ಸಂಸ್ಥೆಗಳ ಗಣ್ಯರು, ಆಸ್ಪತ್ರೆಯ ಸಿಬ್ಬಂದಿಗಳು, ಶಿಬಿರಾರ್ಥಿಗಳು ಮತ್ತು ಅವರ ಪೋಷಕರು ಹಾಗೂ ಸೇವಾಭಾರತಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸೇವಾಭಾರತಿಯ ಸಿಬ್ಬಂದಿ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಕ್ಷೇತ್ರ ಸಂಯೋಜಕರಾದ ಅಖಿಲೇಶ್. ಎ ಇವರು ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು. ಸೇವಾಧಾಮದ ಪೀರ್ ಟ್ರೈನರ್ ಆದ ಮೋಹನ್. ಕೆ ಅರಿಯಡ್ಕ ಇವರು ಧನ್ಯವಾದ ವಿತ್ತರು.