ಪೆರುವಾಜೆಯಲ್ಲಿ ತಾಲೂಕು ಅಧಿಕಾರಿಗಳ ಗ್ರಾಮ ವಾಸ್ತವ್ಯ, ಗ್ರಾಮ ಭೇಟಿ ಮಾಡಿ ಸರಕಾರಿ ಯೋಜನೆಗಳ ಮಾಹಿತಿ ನೀಡಿದ ತಹಶೀಲ್ದಾರ್

0

ಪೆರುವಾಜೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮುಗಿದ ನಂತರ ತಹಶೀಲ್ದಾರ್ ಅನಿತಾಲಕ್ಷ್ಮಿ ಅವರು ಜಾಲ್ಪಣೆ ಕೊರಗರ ಮನೆಗಳಿಗೆ , ದುರ್ಗಾನಗರ ಪರಿಶಿಷ್ಟ ಜಾತಿ ಕುಟುಂಬಗಳ ಮನೆಗಳಿಗೆ,ದೇರ್ನಡ್ಕ ಪರಿಶಿಷ್ಟ ಜಾತಿ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಅವರ ಸಮಸ್ಯೆ ಗಳ ಮಾಹಿತಿ ಪಡೆದು ,ಸರಕಾರಿ ಯೋಜನೆಗಳ ಮಾಹಿತಿ ನೀಡಿದರು.


ಇದರ ಮೊದಲು ಪೆರುವಾಜೆ ಅಂಗನವಾಡಿ, ಸ.ಹಿ.ಪ್ರಾಥಮಿಕ ಶಾಲೆಗೂ ಭೇಟಿ ನೀಡಿದರು.


ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ, ಶಿಶು ಕಲ್ಯಾಣ ಇಲಾಖೆ ಅಧಿಕಾರಿ ಶ್ರೀಮತಿ ರಶ್ಮಿ ನೆಕ್ರಾಜೆ, ಸಮಾಜ ಕಲ್ಯಾಣ ಅಧಿಕಾರಿ ರವಿಕುಮಾರ್, ಕಂದಾಯ ನಿರೀಕ್ಷಕರಾದ ಕೊರಗಪ್ಪ ಹೆಗ್ಡೆ, ಗ್ರಾಮ ಲೆಕ್ಕಾಧಿಕಾರಿ ಶಿವರಾಜ್ , ಪಂಚಾಯತ್ ಅಧ್ಯಕ್ಷ ರಾದ ಜಗನ್ನಾಥ ಪೂಜಾರಿ, ಉಪಾಧ್ಯಕ್ಷೆ ಶ್ರೀಮತಿ ಚಂದ್ರಾವತಿ, ಗ್ರಾ.ಪಂ.ಸದಸ್ಯರಾದ ಸಚಿನ್ ರಾಜ್ ಶೆಟ್ಟಿ, ಮಾಧವ ಮುಂಡಾಜೆ, ಪದ್ಮನಾಭ ಶೆಟ್ಟಿ, ಶ್ರೀಮತಿ ರೇವತಿ, ಶ್ರೀಮತಿ ಗುಲಾಬಿ, ಶ್ರೀಮತಿ ಶಹಿನಾಜ್ , ಪಂಚಾಯತ್ ಸಿಬ್ಬಂದಿ ದಯಾನಂದ ಜೊತೆಗಿದ್ದರು.