ಕೊಲ್ಲಮೊಗ್ರ : ಯುವಕ ಹಾಗೂ ಯುವತಿ ಮಂಡಲಗಳ ಪದಗ್ರಹಣ

0

ಕೊಲ್ಲಮೊಗ್ರ ಗ್ರಾಮದ ಮಹಾತ್ಮ ಯುವಕ ಮಂಡಲ ಹಾಗೂ ಚೈತನ್ಯ ಯುವತಿ ಮಂಡಲ ಇವುಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಂದು ಮಯೂರ ಕಲಾಮಂದಿರ ಕೊಲ್ಲಮೊಗ್ರದಲ್ಲಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಅಧ್ಯಕ್ಷ ತೇಜಸ್ವಿ ಕಡಪಲ ರವರು ದೀಪ ಬೆಳಗಿಸಿ ನೂತನ ಮಂಡಳ ಗಳಿಗೆ ದಾಖಲೆ ಪತ್ರಗಳನ್ನ ಹಸ್ತಾಂತರ ಮಾಡಿ ಶುಭ ಹಾರೈಸಿದರು.



ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕ ದಿನೇಶ್ ಹಾಲೆಮಜಲು ಯುವಕ ಮಂಡಲದ ಗೌರವಾಧ್ಯಕ್ಷ ಚಂದ್ರಶೇಖರ ಕೋನಡ್ಕ, ಅಧ್ಯಕ್ಷ ಮಿಥುನ್ ಪೈಲೂರು ಯುವತಿ ಮಂಡಲದ ಗೌರವಾಧ್ಯಕ್ಷೆ ನೀಲಾವತಿ ಅಧ್ಯಕ್ಷ ಮೈತ್ರಿ ಪೆರ್ನಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯುವಕ ಮಂಡಲದ ಸದಸ್ಯರು ಯುವತಿ ಮಂಡಲದ ಸದಸ್ಯರು ಉಪಸ್ಥಿತರಿದ್ದರು. ರಂಜಿತ್ ಕಾರ್ಯಕ್ರಮ ನಿರೂಪಿಸಿದರು. (ವರದಿ.ಡಿ.ಹೆಚ್)