ಪಂಜ: ಚಿತ್ರಕಲಾ ಲೋವರ್ ಮತ್ತು ಹೈಯರ್ ಗ್ರೇಡ್ ಪರೀಕ್ಷೆ ಆರಂಭ

0

ಕರ್ನಾಟಕ ಪ್ರೌಢಶಿಕ್ಷಣ ಇಲಾಖೆ ಬೆಂಗಳೂರು ಇವರು ನಡೆಸುವ ಚಿತ್ರಕಲಾ ಲೋವರ್ ಮತ್ತು ಹೈಯರ್ ಗ್ರೇಡ್ ಪರೀಕ್ಷೆಯು ನ.23 ರಂದು ಪ್ರಾರಂಭವಾಗಿದ್ದು ತಾಲೂಕಿನ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಒಂದಾದ ಸರಕಾರಿ ಪದವಿ ಪೂರ್ವ ಕಾಲೇಜು ಪಂಜದಲ್ಲಿ ಈ ಬಾರಿ 272 ವಿಧ್ಯಾರ್ಥಿಗಳು ಹಾಜರಾಗಿದ್ದರು,ತಾಲೂಕಿನಿಂದ ಸರಕಾರಿ ಪ್ರೌಢ ಶಾಲೆ ,ಎಣ್ಮೂರು, ಸರಕಾರಿ ಪ್ರೌಢಶಾಲೆ ಎಡಮಂಗಲ, ಸರಕಾರಿ ಪ್ರೌಢಶಾಲೆ ಪಂಜ,ಜ್ನಾನಗಂಗಾ ಆಂಗ್ಲಮಾಧ್ಯಮ ಪ್ರೌಢ ಶಾಲೆ ಬೆಳ್ಳಾರೆ,ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸುಳ್ಯ, ಸಂತ ಜೊಸೆಫ್ ಅಂಗ್ಲಮಾಧ್ಯಮ ಪ್ರೌಢ ಶಾಲೆ ಸುಳ್ಯ, ಕೆ ವಿ ಜಿ ಇಂಟರ್ನ್ಯಾಷನಲ್ ಆಂಗ್ಲಮಾದ್ಯಮ ಪ್ರೌಢ ಶಾಲೆ ಸುಳ್ಯ, ಶಾರದ ಹೆಮ್ಮಕ್ಕಳ ಪ್ರೌಢ ಶಾಲೆ ಸುಳ್ಯ,ಕೆ ಪಿ ಎಸ್ ಬೆಳ್ಳಾರೆ,ಜ್ನಾನದೀಪ ಆಂಗ್ಲಮಾದ್ಯಮ ಪ್ರೌಢ ಶಾಲೆ ಎಲಿಮಲೆ,ಮತ್ತು ಕುಮಾರಸ್ವಾಮಿ ಆಂಗ್ಲಮಾಧ್ಯಮ ಪ್ರೌಢಶಾಲೆ ಸುಬ್ರಹ್ಮಣ್ಯ ಇಲ್ಲಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪರೀಕ್ಷೆ ಯು ನ. 23,24,25 ಒಟ್ಟು 3ದಿವಸ 6 ವಿಷಯಗಳಲ್ಲಿ ಜರಗಲಿದೆ.