ಕೇರ್ಪಳ ರಸ್ತೆ ಬಂದ್ ಹಿನ್ನಲೆ-ಸ್ಥಳೀಯರಿಂದ ಶ್ರಮದಾನದ ಮೂಲಕ ದ್ವಿಚಕ್ರ ವಾಹನ ಸಂಚಾರಕ್ಕೆ ವ್ಯವಸ್ಥೆ

0

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕೇರ್ಪಳ ರಸ್ತೆಯ ದುರ್ಗಾ ಪರಮೇಶ್ವರಿ ಕಲಾ ಮಂದಿರದ ಬಳಿಯಿಂದ ಕಾಂಕ್ರೀಟಿಕರಣಗೊಂಡ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಇದರಿಂದಾಗಿ ಈ ಪರಿಸರದ ಸಾರ್ವಜನಿಕರು ಸುತ್ತು ಬಳಸಿ ಸಂಚರಿಸಬೇಕಿತ್ತು.ಅದಲ್ಲದೆ ದ್ವಿಚಕ್ರ ವಾಹನ ಸವಾರರು ತಮ್ಮ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ನಡೆದುಕೊಂಡು ಹೋಗುತ್ತಿದ್ದರು.

ಇದರಿಂದ ಕಚೇರಿ ಕೆಲಸಕ್ಕೆ ಹಾಗೂ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಇದನ್ನು ಮನಗಂಡ ಸ್ಥಳೀಯ ನಗರ ಪಂಚಾಯತ್ ನಾಮ ನಿರ್ದೇಶನ ಸದಸ್ಯ‌ ಬೂಡು ರಾಧಾಕೃಷ್ಣ ರೈ ಯವರ ನೇತೃತ್ವದಲ್ಲಿ ಸ್ಥಳೀಯ ಬೂಡು ಭಗವತಿ ಯುವ ಸೇವಾ ಸಂಘ ಮತ್ತು ಪೃಕೃತಿ ಯುವಕ ಸಂಘದ ಸದಸ್ಯರು ಸೇರಿ ಶ್ರಮದಾನದ ಮೂಲಕ ತಾತ್ಕಾಲಿಕವಾಗಿ ರಸ್ತೆಯ ಬದಿಗೆ ಮಣ್ಣು ತುಂಬಿಸಿ ಸದ್ಯದ ಮಟ್ಟಿಗೆ ದ್ವಿಚಕ್ರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಇದರಿಂದಾಗಿ ಕೇರ್ಪಳ ಪರಿಸರದಲ್ಲಿರುವ ದ್ವಿಚಕ್ರ ವಾಹನ ಸವಾರರು ನಡೆದುಕೊಂಡು ಹೋಗುವುದು ತಪ್ಪಿದಂತಾಗಿದೆ.