ಪೈಲಾರಿನಲ್ಲಿ ಮಿತ್ರ ಕಪ್ 2022 ವಾಲಿಬಾಲ್ ಪಂದ್ಯಾಟದ ಉದ್ಘಾಟನೆ, 8 ತಂಡಗಳ ಮಧ್ಯೆ ಲೀಗ್ ಮಾದರಿಯ ಪಂದ್ಯಾಟ-
ಮಿತ್ರ ವೃಂದ ಪೈಲಾರು ಆಯೋಜನೆ

0

ಪೈಲಾರು ಮಿತ್ರ ವೃಂದ ಇದರ ವತಿಯಿಂದ ಹಮ್ಮಿಕೊಂಡಿರುವ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭವು ನ.27 ರಂದು ಬೆಳಗ್ಗೆ ಪೈಲಾರು ಶಾಲಾ ಮೈದಾನದಲ್ಲಿ ನಡೆಯಿತು.
ಮಿತ್ರ ವೃಂದದ ಅಧ್ಯಕ್ಷ ಶಶಿಕಾಂತ್ ಮಿತ್ತೂರು ಅಧ್ಯಕ್ಷತೆವಹಿಸಿದ್ದರು.


ಹಿರಿಯ ಪ್ರಗತಿಪರ ಕೃಷಿಕ ತಿರುಮಲೇಶ್ವರ ದಂಬೆತೋಟ ರವರು ದೀಪ ಬೆಳಗಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ ಗೌಡ ಮೂಕಮಲೆ, ಪಂಚಾಯತ್ ಸದಸ್ಯ ದಿವಾಕರ ನಾಯ್ಕ್ ಪೈಲಾರು, ಮಿತ್ರ ವೃಂದ ಇದರ ಸ್ಥಾಪಕ ಕಾರ್ಯದರ್ಶಿ ನಾರಾಯಣ ಕೋಡ್ತುಗುಳಿ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷೆ ದೇವಕಿ ಪೈಲಾರು ಉಪಸ್ಥಿತರಿದ್ದರು. ಸೃಜನ್ ಪೈಲಾರು ಪ್ರಾರ್ಥಿಸಿದರು. ಕೋಶಾಧಿಕಾರಿ ಹರ್ಷಿತ್ ದಾತಡ್ಕ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಧನ್ಯರಾಜ್ ಮೂಕಮಲೆ ವಂದಿಸಿದರು. ತಿರ್ಥೇಶ್ ಯಾದವ್ ಕಾರ್ಯಕ್ರಮ ನಿರೂಪಿಸಿದರು.


ಬಳಿಕ ಅತಿಥಿಗಳು ಕ್ರೀಡಾಂಗಣಕ್ಕೆ ತೆರಳಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ನಾರಾಯಣ ಕೋಡ್ತುಗುಳಿ ಯವರು ತೆಂಗಿನ ಕಾಯಿ ಒಡೆಯುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.