ಸ್ನೇಹದಲ್ಲಿ ಸಂವಿಧಾನ ದಿನಾಚರಣೆ

0

“ಭಾರತ ಬೃಹತ್ ಸಂವಿಧಾನವನ್ನು ಹೊಂದಿದೆ. ಲಿಖಿತ ರೂಪದಲ್ಲಿ ಇರುವ ನಮ್ಮ ಸಂವಿಧಾನದ ಆದರ್ಶಗಳನ್ನು ನಾವು ಪಾಲಿಸಬೇಕು. ಕೇವಲ ಹಕ್ಕುಗಳನ್ನು ಮಾತ್ರ ಬೇಕೆನ್ನದೆ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸಬೇಕು. ಭಾರತವನ್ನು ಸದೃಢ ಮತ್ತು ಸಂಪನ್ನ ರಾಷ್ಟ್ರವನ್ನಾಗಿಸಬೇಕು. ಭಾರತದಲ್ಲಿ ಅಭಿವೃದ್ಧಿ ಸಾಧಿಸಬೇಕಾದರೆ ಭ್ರಷ್ಟಾಚಾರದಿಂದ ಮುಕ್ತರಾಗಬೇಕಿದೆ” ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಹೇಳಿದರು.


ಇವರು ದಿನಾಂಕ 26.11.2022ರಂದು ಸ್ನೇಹ ಶಾಲೆಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಶಿಕ್ಷಕ ದೇವಿಪ್ರಸಾದ ಜಿ.ಸಿ ಮಾತನಾಡಿ “ಭಾರತ ಪ್ರಜಾಪ್ರಭುತ್ವದ ತವರು. ನಮ್ಮ ದೇಶದ ಸಂವಿಧಾನದ ಪ್ರಾಥಮಿಕ ರಕ್ಷಕರು ನಾವಾಗಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.