ಪಲ್ಲೋಡಿಯಲ್ಲಿ ಯಕ್ಷಗಾನ ತಾಳ ಮದ್ದಳೆ -ಶ್ರೀರಾಮ ದರ್ಶನ, ಯಕ್ಷಗಾನ ವ್ಯಕ್ತಿತ್ವ ರೂಪಿಸುವ ಮಾಧ್ಯಮ : ಕೆ.ಕೃಷ್ಣ ವೈಲಾಯ, ಶಾರಾದಾಂಬಾ ಟ್ರಸ್ಟ್ ನಿಂದ ಧಾರ್ಮಿಕ ಕ್ರಾಂತಿ : ದಾಮೋದರ ಗೌಡ

0

ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ ಇದರ ಆಶ್ರಯದಲ್ಲಿ ಶ್ರೀ ಉಳ್ಳಾಕುಲು ಕಲಾರಂಗ ಪಲ್ಲೋಡಿ ಸಹಭಾಗಿತ್ವದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ-2022 ಪಲ್ಲೋಡಿಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಕೃಷ್ಣ ವೈಲಾಯ ಉದ್ಘಾಟಿಸಿ ಮಾತನಾಡಿ” ಭಾರತದ ಪರಂಪರೆಯನ್ನು ,ಭಾರತೀಯ ಧರ್ಮವನ್ನು ,ತತ್ವಗಳನ್ನು ಪ್ರಚಾರ ಪಡಿಸುವ ಮತ್ತು ಜ್ಞಾನ ವೃದ್ಧಿಸುವ ಅಪೂರ್ವ ಕ್ಷೇತ್ರ ಯಕ್ಷಗಾನ.ಅದು ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಮಾಧ್ಯಮ”. ಎಂದು ಹೇಳಿದರು.


ಶ್ರೀ ಉಳ್ಳಾಕುಲು -ಚಾಮುಂಡಿ ದೈವಸ್ಥಾನದ ಅಧ್ಯಕ್ಷ ದಾಮೋದರ ಗೌಡ ಪಲ್ಲೋಡಿ ಮಾತಾನಾಡಿ ” ಶ್ರೀ ಶಾರದಾಂಬಾ ಟ್ರಸ್ಟ್ ಭಜನಾ ಕಮ್ಮಟ, ಯಕ್ಷಗಾನ, ಧಾರ್ಮಿಕ ಕಾರ್ಯಕ್ರಮಗಳ ನೀಡುವ ಮೂಲಕ ಧಾರ್ಮಿಕ ಕ್ರಾಂತಿ ಮಾಡಿದೆ. ವಿಶೇಷವಾಗಿ ಇದರ ಅಧ್ಯಕ್ಷ ಬಾಲಕೃಷ್ಣ ಪುತ್ಯ ರವರು ವಿಶೇಷ ಮುತುವರ್ಜಿಯಿಂದ ನಿರಂತರವಾಗಿ ಸೇವೆ ಸಲ್ಲಿಸಿತ್ತಿದ್ದು, ಅವರಿಗೆ ಎಲ್ಲರ ಪ್ರೋತ್ಸಾಹ ಅಗತ್ಯ “ಎಂದು ಹೇಳಿದರು.ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಉಪಾಧ್ಯಕ್ಷ ತಿಮ್ಮಪ್ಪ ಗೌಡ ಸಭಾಧ್ಯಕ್ಷತೆ ವಹಿಸಿದ್ದರು.


ಅತಿಥಿಗಳಾಗಿ ವಾಚಣ್ಣ ಗೌಡ ಜಾಕೆ, , ಶ್ರೀ ಉಳ್ಳಾಕುಲು ಕಲಾರಂಗದ ಅಧ್ಯಕ್ಷ ಕವನ್ ಪಲ್ಲೋಡಿ ಉಪಸ್ಥಿತರಿದ್ದರು.ಇದೇ ವೇಳೆ ವಾಚಣ್ಣ ಗೌಡ ಜಾಕೆ ಯವರನ್ನು ಸನ್ಮಾನಿಸಲಾಯಿತು.
ಭಾಗವತ ಪ್ರಶಾಂತ್ ಪಂಜ ರವರನ್ನು ಗೌರವಿಸಲಾಯಿತು.ಈ ವೇಳೆ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಶ್ರೀಮತಿ ನಿರ್ಮಲಾ ಪಲ್ಲೋಡಿ ಪ್ರಾರ್ಥಿಸಿದರು.ರಾಜಕುಮಾರ್ ಬೇರ್ಯ ಸ್ವಾಗತಿಸಿದರು.ಭಜನಾ ಮಂಡಳಿ ಕಾರ್ಯದರ್ಶಿ ಗುರುಪ್ರಸಾದ್ ತೋಟ ನಿರೂಪಿಸಿದರು.ಪ್ರದೀಪ್ ಪಲ್ಲೋಡಿ ವಂದಿಸಿದರು.
ಬಳಿಕ ‘ಶ್ರೀರಾಮ ದರ್ಶನ’. ತಾಳಮದ್ದಳೆ ಜರುಗಿತು.ಭಾಗವತರಾಗಿ ಪ್ರಶಾಂತ್ ಪಂಜ, ಅರ್ಥದಾರಿಗಳಾಗಿ ವೆಂಕಟ್ರಮಣ ಭಟ್ ಸುಳ್ಯ, ಕು.ರಚನಾ ಚಿದ್ಗಲ್ಲು, ಮದ್ದಳೆ- ಚಂದ್ರಶೇಖರ ಗುರುವಾಯನಕೆರೆ , ಚೆಂಡೆ -ಕುಮಾರ ಸುಬ್ರಹ್ಮಣ್ಯ ವಳ್ಳಕುಂಜ, ಅರ್ಥದಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ಗಣರಾಜ್ ಕುಂಬ್ಳೆ, ವೆಂಕಟೇಶ್ ಕುಮಾರ್ ಪಾಲ್ಗೊಂಡಿದ್ದರು.