ರಾಜ್ಯ ಮಟ್ಟದ ಯುವ ಸಂಸತ್ತು : ಕೃತಸ್ವರ ದೀಪ್ತ ಪ್ರಥಮ

0


ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿ, ಹಾಗೂ ಸಂಸದೀಯ ವ್ಯವಹಾರಗಳ ಮತ್ತು ಶಾಸನ ರಚನೆ ಇಲಾಖೆ ನಡೆಸುವ ರಾಜ್ಯ ಮಟ್ಟದ ಯುವ ಸಂಸತ್ತು ಸ್ಪರ್ಧೆ ನ. 29 ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆದಿದ್ದು ಸುಳ್ಯ ಸ.ಪ.ಪೂ ಕಾಲೇಜಿನ ಹತ್ತನೇ ತರಗತಿ ವಿದ್ಯಾರ್ಥಿ ಕೃತಸ್ವರ ದೀಪ್ತ ಕೆ ಪ್ರಥಮ ಸ್ಥಾನಿಯಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ ವಿಧಾನ ಸಭೆಯ ಅಧಿವೇಶನದ ಮಾದರಿಯಲ್ಲೇ ಸಂಸದೀಯ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆಸುವ ಈ ಸ್ಪರ್ಧೆಯಲ್ಲಿ 35 ಶೈಕ್ಷಣಿಕ ಜಿಲ್ಲೆಗಳ 70 ಸ್ಪರ್ಧಿಗಳು ಭಾಗಹಿಸಿದ್ದರು.


ಮೊದಲ ಹಂತದಲ್ಲಿ ಈ ಸ್ಪರ್ಧಾಳುಗಳಿಂದಲೇ ಅತ್ಯಧಿಕ ಮತ ಪಡೆದು ಮುಖ್ಯಮಂತ್ರಿ ಹುದ್ದೆಗೆ ಚುನಾಯಿತರಾದ ಕೃತಸ್ವರ ದೀಪ್ತ, ನಂತರದ ಅಧಿವೇಶನ ಸ್ಪರ್ಧೆಯಲ್ಲಿ ಆಯ್ಕೆಯಾದ ಹತ್ತು ಸ್ಪರ್ಧಿಗಳಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಬಹುಮಾನ ಪಡೆದುಕೊಂಡಿದ್ದಾರೆ.
ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ರವರು, ಗಾಂದೀನಗರ ಕ್ಷೇತ್ರದ ಶಾಸಕ ದಿನೇಶ್ ಗಂಡೂರಾವ್, ಸಂಸದೀಯ ಇಲಾಖಾ ಕಾರ್ಯದರ್ಶಿ ಜಿ ಶ್ರೀಧರ, ಶಿಕ್ಷಣ ಇಲಾಖೆಯ ನಿರ್ದೇಶಕರಾದ ಸಿರಿಯಣ್ಣವರ್ ಲಿಲಿತಾ ಚಂದ್ರಶೇಖರ್ ಹಾಗೂ ಇಲಾಖೆಗಳ ಇತರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಈ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪನಿರ್ದೇಶಕರಾದ ಸುಧಾಕರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಪಿ ಮಹದೇವ, ಜಿಲ್ಲಾ ನೋಡಲ್ ಅಧಿಕಾರಿ ಶಮಂತ್ ವಿ, ಸ.ಪ.ಪೂ.ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಜೇಶ್ವರಿ ಕಾಡುತೋಟ, ಜಿಲ್ಲಾ ತಂಡದ ನೊಡಲ್ ನಿರ್ವಹಿಸಿದ ಸಹಶಿಕ್ಷಕಿ ಪೂರ್ಣಿಮಾ.ಟಿ, ಸ್ಪರ್ಧೆಯ ಮಾರ್ಗದರ್ಶನ ನೀಡಿದ ನಿವೃತ್ತ ಉಪನ್ಯಾಸಕ ಗುಡ್ಡಪ್ಪ ಬಲ್ಯ, ಸಂಸ್ಥೆಯ ಶಿಕ್ಷಕರು ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.