
ಆಲೆಟ್ಟಿ ಗ್ರಾಮದ ಏಣಾವರ ನಡುಮನೆ ತರವಾಡು ದೈವಸ್ಥಾನದ ಲ್ಲಿ ಡಿ. 12 ಮತ್ತು 13 ರಂದು ಶ್ರೀ ದೈವಗಳ ಕೋಲವು ನಡೆಯಲಿದೆ. ಡಿ.12 ರಂದು ಬೆಳಗ್ಗೆ
ಶ್ರಿ ವೆಂಕಟರಮಣ ದೇವರ ಹರಿಸೇವೆ ನಡೆದು ರಾತ್ರಿ ಶ್ರೀ ದೈವಗಳಿಗೆ ಕೂಡಿ
ಉಪದೈವಗಳ ಕೋಲವು ನಡೆಯಲಿರುವುದು. ಡಿ.13 ರಂದು ಪೂರ್ವಾಹ್ನ ಶ್ರೀ ರಕ್ತೇಶ್ವರೀ ಮತ್ತು ಮೊಡಚಾಮುಂಡಿ ದೈವದ ಕೋಲವಾಗಿ
ಮಧ್ಯಾಾಹ್ನ ಅನ್ನ ಸಂತರ್ಪಣೆತಾಗಲಿರುವುದು. ಬಳಿಕ ಗಂಟೆ 1-00 ರಿಂದ
ಶ್ರೀ ವಿಷ್ಣುಮೂರ್ತಿ ಹಾಗೂ ಧರ್ಮದೈವ ಮತ್ತು ಶ್ರೀ
ಪಾಷಾಣಮೂರ್ತಿ ದೈವಗಳ
ನಡಾವಳಿಯು
ಜರಗಲಿರುವುದು. ಸದ್ರಿ ದಿನಗಳಲ್ಲಿ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಲಿರುವುದು.