ಶಮಂತ್ ಕೆದಂಬಾಡಿ ಸೌತ್ ಜೋನ್ ಇಂಟರ್ ಯುನಿವರ್ಸಿಟಿ ಕಬಡ್ಡಿಗೆ ಆಯ್ಕೆ

0

ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿ(AIU), ಬೆಂಗಳೂರು ಸಿಟಿ ಯುನಿವರ್ಸಿಟಿ(BCU)ಹಾಗೂ
ಎಸ್.ಟಿ. ಪ್ರಾನ್ಸಿಸ್ ಕಾಲೇಜು ಕೋರಮಂಗಲ, ಬೆಂಗಳೂರು ಇವುಗಳ ಸಹಭಾಗಿತ್ವದಲ್ಲಿ ನಡೆಸಲ್ಪಡುವ 2022-23 ನೇ ಸಾಲಿನ ಸೌತ್ ಜೋನ್ ಇಂಟರ್ ಯುನಿವರ್ಸಿಟಿ ಕಬಡ್ಡಿ ಟೂರ್ನಮೆಂಟ್ (ಮೆನ್) ವಿಭಾಗಕ್ಕೆ ಶಮಂತ್ ಕೆದಂಬಾಡಿ ಆಯ್ಕೆ ಯಾಗಿರುತ್ತಾರೆ. ಇವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ, ಬೆಂಗಳೂರು ತಂಡದ ಮೂಲಕ ಪ್ರತಿನಿಧಿಸುತ್ತಿದ್ದಾರೆ. ಮಡಿಕೇರಿ ತಾಲೂಕಿನ ಕೊಯಿನಾಡಿನ ಜಗದೀಶ್ ಕೆದಂಬಾಡಿ ಮತ್ತು ಶ್ರೀಮತಿ ವಾಣಿ ಜಗದೀಶ್ ರವರ ಪುತ್ರರಾಗಿರುವ ಇವರು ಎ.ಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಂಗಳೂರು ಇಲ್ಲಿ ಎಮ್.ಎಲ್.ಟಿ .ಹೆಲ್ತ್‌ ಸೈನ್ಸ್ ನ ದ್ವಿತೀಯ ವರ್ಷದ ವಿಧ್ಯಾರ್ಥಿಯಾಗಿರುತ್ತಾನೆ.