ಸುಳ್ಯ ಅನ್ಸಾರಿಯ ಎಜುಕೇಶನಲ್ ಸೆಂಟರ್ ನಲ್ಲಿ ಉಮರಾ ಸಂಗಮ

0

ಸುಳ್ಯ ನಾವೂರು ಅನ್ಸಾರಿಯಾ ಎಜುಕೇಶನಲ್ ಸೆಂಟರ್ನಲ್ಲಿ ವಾರ್ಷಿಕ ಸ್ವಲಾತ್ ಕಾರ್ಯಕ್ರಮದ ಅಂಗವಾಗಿ ಇಂದು ಉಮರಾ ಸಂಗಮ ಕಾರ್ಯಕ್ರಮ ನಡೆಯಿತು.

ಸುಳ್ಯ ತಾಲೂಕಿನ ವಿವಿಧ ಭಾಗಗಳಿಂದ ನೂರಾರು ಮುಸ್ಲಿಂ ಮುಖಂಡರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ ವಹಿಸಿದ್ದರು. ಸ್ಥಳೀಯ ಮಸೀದಿ ಕತೀಬರಾದ ಉಮ್ಮರ್ ಮುಸ್ಲಿಯಾರ್ ಮರ್ದಾಳ ದುವಾ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಅಧ್ಯಾಪಕ ಅಡ್ವಕೇಟ್ ಅಬ್ದುಲ್ಲಾ ಪ್ರಾಸ್ತಾವಿಕ ಮಾತನಾಡಿ ಸಂಸ್ಥೆ ನಡೆದು ಬಂದ ಹಾದಿಯನ್ನು ವಿವರಿಸಿದರು.


ಖ್ಯಾತ ವಾಗ್ಮಿ ಮಹಮ್ಮದ್ ಅಲಿ ಸಕಾಫಿ ಸೂರಿ ಬೈಲು ಸಂಸ್ಥೆ ನಡೆದು ಬಂದ ಹಾದಿಯ ಕುರಿತು ಮಾತನಾಡಿ ಅನಾಥ ಮತ್ತು ನಿರ್ಗತಿಕರ ಮಕ್ಕಳ ಶಿಕ್ಷಣ ಮತ್ತು ಪಾಲನೆಗಾಗಿ ಕಾರ್ಯಚರಿಸುತ್ತಿರುವ ಅನ್ಸಾರಿಯಾ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಲತೀಫ್ ಅರ್ಲಡ್ಕ, ಕೋಶಾಧಿಕಾರಿ ಹಾಜಿ ಆದಂ ಕಮ್ಮಾಡಿ, ಹಾಗೂ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಂದಿನ ದಿನಗಳಲ್ಲಿ ಸಂಸ್ಥೆಯ ಅಭಿವೃದ್ಧಿಗಾಗಿ ರೂಪಿಸಬಹುದಾದ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು.
ಮುಖಂಡರುಗಳಾದ ಹಸನ್ ಸಕಾಫಿ ಬೆಳ್ಳಾರೆ,ಹಾಜಿ ಇಸಾಕ್ ಸಾಹೇಬ್ ಪಾಜಪಳ್ಳ, ಟಿ ಎಂ ಶಹೀದ್ ತೆಕ್ಕಿಲ್, ಹಾಜಿ ಪಿಎ ಮಹಮ್ಮದ್, ಎಸ್ ಎ ಸಂಸುದ್ದೀನ್ ಅರಂಬೂರು, ಇಕ್ಬಾಲ್ ಎಲಿಮಲೆ ಮೊಹಮ್ಮದ್ ಕುನ್ನಿ ಗೂನಡ್ಕ, ಹಾಜಿ ಉಮರ್ ಗೂನಡ್ಕ, ಇಬ್ರಾಹಿಂ ಕದಿಕಡ್ಕ, ಇಕ್ಬಾಲ್ ಎಲಿಮಲೆ, ಹಾಜಿ ಮುಸ್ತಫ ಜನತಾ, ಕೆ ಎಸ್ ಉಮ್ಮರ್, ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು, ಅಬ್ದುಲ್ ರಜಾಕ್ ಹಾಜಿ ರಾಜಧಾನಿ ಜುವೆಲ್ಲರ್ಸ್,ಅಬ್ದುಲ್ ಕಾದರ್ ಪ್ರಗತಿ ಬೆಳ್ಳಾರೆ, ಮಹಮೂದ್ ಬೆಳ್ಳಾರೆ, ತಾಜ್ ಮಹಮ್ಮದ್ ಸಂಪಾಜೆ, ಜಿ ಕೆ ಹಮೀದ್ ಕಲ್ಲುಗುಂಡಿ,ಹಸೈನಾರ್ ವಳಲಂಬೆ, ಅಬ್ದುಲ್ ಹಮೀದ್ ಬೀಜಕೊಚ್ಚಿ,ಸಿದ್ದೀಕ್ ಕೋಕೋ ಸೇರಿದಂತೆ ವಿವಿಧ ಮುಖಂಡರುಗಳು ಭಾಗವಹಿಸಿದ್ದರು.
ಸಂಸ್ಥೆಯ ಪದಾಧಿಕಾರಿಗಳಾದ ಕೆ ಬಿ ಅಬ್ದುಲ್ ಮಜೀದ್, ಶಾಫಿ ಕುತ್ತಮಟ್ಟೆ ಕಾರ್ಯಕ್ರಮ ನಿರೂಪಿಸಿದರು.