ಸುಬ್ರಹ್ಮಣ್ಯ ಡಾ. ರವಿ ಕಕ್ಕೆಪದವುರವರಿಂದ ತಮ್ಮ ಸಿಬ್ಬಂದಿಗಳಿಗೆ‌ ಸನ್ಮಾನ, ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹಸಿರುಕಾಣಿಕೆ ಸಮರ್ಪಣೆ

0

ಸುಬ್ರಹ್ಮಣ್ಯದ ಅನುಗ್ರಹ ಕನ್ ಸ್ಟ್ರಕ್ಷನ್ ನ ಮಾಲಕರಾದ ಡಾ. ರವಿ ಕಕ್ಕೆಪದವುರವರು ತಮ್ಮ ಸಂಸ್ಥೆಗೆ 22 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ನ. 28ರಂದು ಸನ್ಮಾನಿಸಿದರು. ಬಳಿಕ ಸಂಸ್ಥೆಯ ಪರವಾಗಿ ಸುಬ್ರಹ್ಮಣ್ಯ ಷಷ್ಠಿಯ ಅಂಗವಾಗಿ ಹಸಿರು ಕಾಣಿಕೆ ಸಮರ್ಪಣೆ ನಡೆಯಿತು.


ಸಂಸ್ಥೆಯಲ್ಲಿ ಸುಮಾರು 15 ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ
ಚಾಲಕರಾದ ವಾಸುದೇವ ಯೇನೆಕಲ್ಲು, ಚಿದಾನಂದ ಯೇನೆಕಲ್ಲು, ಸೆಂಟ್ರಿಂಗ್ ಮೇಸ್ತ್ರಿ ರವಿ ಕುಲ್ಕುಂದ, ಸಹಾಯಕ ಹರೀಶ್ ದೇವರಗದ್ದೆ, ಮೇಸ್ತ್ರಿ ರಕ್ಷಿತ್ ಕಕ್ಕೆಪದವುರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಗೋಪಾಲ್ ಎಣ್ಣೆಮಜಲು, ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಅಧ್ಯಕ್ಷ ಮೋಹನ್ ದಾಸ್ ರೈ, ಅಟೋರಿಕ್ಷಾ ಚಾಲಕ ಮಾಲಕರ ಸಂಘದ ಕಾರ್ಯದರ್ಶಿ ಸಂತೋಷ್, ದೋಣಿಮಕ್ಕಿ ಫ್ರೆಂಡ್ಸ್ ಅಧ್ಯಕ್ಷ ಉದಯಕುಮಾರ್, ಗುತ್ತಿಗೆದಾರರಾದ ಪ್ರಕಾಶ್ ಕುಂದಾಪುರ, ಜೇಸಿ ಪೂರ್ವಾಧ್ಯಕ್ಷ ಮಣಿಕಂಠ, ಜೇಸಿ ಅಧ್ಯಕ್ಷ ದೀಪಕ್ ನಂಬಿಯಾರ್, ಜಗದೀಶ್ ಸಾಲ್ಯಾನ್ ಯೇನೆಕಲ್ಲು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ಕೊಡುಗೆಯಾಗಿ ನೀಡಿದ ಟಿ-ಶರ್ಟ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಬಳಿಕ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಮೂಲಕ ಅನುಗ್ರಹ ಕನ್ ಸ್ಟ್ರಕ್ಷನ್ ನ ಎಲ್ಲಾ ಸಿಬ್ಬಂದಿಗಳ ಪರವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಷಷ್ಠಿ ಮಹೋತ್ಸವದ ಅಂಗವಾಗಿ ಹಸಿರು ಕಾಣಿಕೆ ಸಮರ್ಪಣೆ ನಡೆಯಿತು.