ಭಾರತೀಯ ವೈದ್ಯಕೀಯ ಸಂಘ ಸುಳ್ಯ ಶಾಖೆ ವತಿಯಿಂದ ಕನ್ನಡ ರಾಜ್ಯೋತ್ಸವ – ಸನ್ಮಾನ

0

ಭಾರತೀಯ ವೈದ್ಯಕೀಯ ಸಂಘ ಸುಳ್ಯ ಶಾಖೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಇತ್ತೀಚೆಗೆ ನಡೆಯಿತು.

ಈ ಸಂದರ್ಭ ಹಲವು ವರ್ಷಗಳಿಂದ ಕನ್ನಡ ಶಾಲೆಯನ್ನು ನಡೆಸುತ್ತಾ, ಸ್ನೇಹ ಶಾಲಾ ಮುಖ್ಯೋಪಾಧ್ಯಯಿನಿಯಾಗಿ ನಿರಂತರ ಶ್ರದ್ಧೆಯಿಂದ ದುಡಿದ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಅವರಿಗೆ ಸಂಘದ ಪರವಾಗಿ ಗೌರವ ಸನ್ಮಾನ ನಡೆಸಲಾಯಿತು. ಡಾ| ಚಂದ್ರಶೇಖರ ದಾಮ್ಲೆ, ಡಾ. ಅರುಣಾ ಸಿ.ಆರ್,
ಡಾ. ಕರುಣಾಕರ ಕೆ.ವಿ. ಉಪಸ್ಥಿತರಿದ್ದರು.

ಸಂಘದ ಸದಸ್ಯರಿಗೆ ಕನ್ನಡ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಲಾಗಿತ್ತು.

ಐಎಂಎ ಅಧ್ಯಕ್ಷೆ ಡಾ. ವೀಣಾ ಎನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ರಜನಿ ಮತ್ತು ಡಾ. ಸೌಮ್ಯಾ ಸಹಕರಿಸಿದರು.
ಡಾ. ಅಮಿತ್ ಕುಮಾರ್ ಸನ್ಮಾನಿತರನ್ನು ಪರಿಚಯಿಸಿದರು.