ಜೇಸಿಐ ಪಂಜ ಪಂಚಶ್ರೀ ನೂತನ ಪದಾಧಿಕಾರಿಗಳ ಆಯ್ಕೆ
ಅಧ್ಯಕ್ಷರಾಗಿ:ಲೋಕೇಶ್ ಆಕ್ರಿಕಟ್ಟೆ, ಕಾರ್ಯದರ್ಶಿಯಾಗಿ: ವಾಚಣ್ಣ‌ಕೆರೆಮೂಲೆ, ಕೋಶಾಧಿಕಾರಿಯಾಗಿ: ಜೀವನ್ ಶೆಟ್ಟಿಗದ್ದೆ

0

ಜೇಸಿಐ ಪಂಜ ಪಂಚಶ್ರೀ ಇದರ 26 ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ಗಣೇಶ್ ಪ್ರಸಾದ್ ಭೀಮಗುಳಿ ರವರ ಅಧ್ಯಕ್ಷತೆಯಲ್ಲಿ ಡಿ.2 ರಂದು ಶಾರದಾಂಬಾ ಸಭಾ ಭವನದಲ್ಲಿ ನಡೆಯಿತು.ಅಧ್ಯಕ್ಷರಾಗಿ ಲೋಕೇಶ್ ಆಕ್ರಿಕಟ್ಟೆ ,ಕಾರ್ಯದರ್ಶಿಯಾಗಿ ವಾಚಣ್ಣ ಕೆರೆಮೂಲೆ ,
ಜತೆ ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಕುದ್ಪಾಜೆ ,
ಕೋಶಾಧಿಕಾರಿಯಾಗಿ ಜೀವನ್ ಶೆಟ್ಟಿಗದ್ದೆ , ಉಪಾಧ್ಯಕ್ಷರಾಗಿ
ಜೀವನ್ ಮಲ್ಕಜೆ ,ಪ್ರವೀಣ್ ಕಾಯರ,ದೇವಿಪ್ರಸಾದ್ ಚಿಕ್ಮುಳಿ,ಕೌಶಿಕ್ ಕುಳ,ಕುಸುಮಾಧರ ಕಕ್ಯಾನ, ನಿರ್ದೇಶಕರಾಗಿ ವಿಜೇಶ್ ಹಿರಿಯಡ್ಕ,ಗಗನ್ ಕಿನ್ನಿಕುಮೇರಿ,ಷಣ್ಮುಖ ಕಟ್ಟ, ಅಶ್ವತ್ ಬಾಬ್ಲುಬೆಟ್ಟು , ಅಶೋಕ್ , ನಿಶಿತ್ ಮುಂಡೋಡಿ,ಚರಣ್ ದೇರಪ್ಪಜ್ಜನ ಮನೆ,ವಿನ್ಯಾಸ್ ಕೊಚ್ಚಿ, ರಕ್ಷಿತ್ ಗೋಳಿಕಟ್ಟೆ ಆಯ್ಕೆಯಾದರು.