ಅಜ್ಜಾವರ : ನಿವೇದಿತಾ ಮಹಿಳಾ ಜಾಗೃತಿ ಗ್ರಾಮ ಸಂಚಲನಾ ತಂಡ ರಚನೆ

0

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ) ಸುಳ್ಯ ಇದರ ಕಾರ್ಯದರ್ಶಿ ಗುಣವತಿ ಕೊಲ್ಲಂತಡ್ಕ, ಖಜಾಂಜಿ ಜಯಂತಿ ಅಜ್ಜಾವರ ಮತ್ತು ನಿರ್ದೇಶಕಿ ಮಮತಾ ಬೊಳುಗಲ್ಲು ಇವರ ಉಪಸ್ಥಿತಿಯಲ್ಲಿ ಅಜ್ಜಾವರದಲ್ಲಿ ನಿವೇದಿತಾ ಸಂಚಲನಾ ತಂಡ ರಚನೆಗೊಂಡಿದೆ.
ಸಂಚಾಲಕರಾಗಿ ಕವಿತಾ ನಾರ್ಕೋಡು ಹಾಗು ಸಹಸಂಚಾಲಕರಾಗಿ ನಳಿನಾಕ್ಷಿ ಅಡ್ಪಂಗಾಯ ಆಯ್ಕೆಗೊಂಡಿದ್ದಾರೆ.
ಸದಸ್ಯರಾಗಿ ವಿಶಾಲಾಕ್ಷಿ ಕಲ್ತಡ್ಕ, ಜಯಶ್ರೀ ನಾಗೇಶ್ ಬೇಲ್ಯ, ಸುಜಾತ ವಸಂತ ಮೇನಾಲ, ಪುಷ್ಪಾ ರಾಜೇಶ್ ದೊಡ್ಡೇರಿ, ಸತ್ಯವತಿ ಬಸವನಪಾದೆ, ಸ್ನೇಹ ಮುಳ್ಯ ಮತ್ತು ಜಯಶ್ರೀ ಮೂಡೂರು ಆಯ್ಕೆಗೊಂಡಿದ್ದಾರೆ.