ಅಡ್ಡತೋಡು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳೋತ್ಸವ

0

ಕೂತ್ಕುಂಜ ಅಡ್ಡತೋಡು ಅಂಗನವಾಡಿ ಕೇಂದ್ರದಲ್ಲಿ ಶ್ರೀ ದುರ್ಗಾ ಮಹಿಳಾ ಮಂಡಲ ಕೂತ್ಕುಂಜ ಹಾಗೂ ಪೋಷಕರ ವತಿಯಿಂದ ಮಕ್ಕಳೋತ್ಸವ ನಡೆಯಿತು.

ಸಭಾಧ್ಯಕ್ಷತೆ ವಹಿಸಿದ್ದ ಅಂಗನವಾಡಿ ಪುಟಾಣಿ ವೈಷ್ಣವಿ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಮಹಿಳಾ ಮಂಡಲದ ಕಾರ್ಯದರ್ಶಿ ಶ್ರೀಮತಿ ವೀಣಾ ಗಿರಿಧರ ಇಟ್ಯಡ್ಕ, ಮಹಿಳಾ ಮಂಡಲದ ಅಧ್ಯಕ್ಷರೂ ವನಿತಾ ಸಮಾಜ ಪಂಜ ಇದರ ಪೂರ್ವಾಧ್ಯಕ್ಷರಾದ ಶ್ರೀಮತಿ ಚಂದ್ರಾವಹೊನ್ನಪ್ಪ ಚಿದ್ಗಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಜ ವಲಯದ ಅಂಗನವಾಡಿ ಮೇಲ್ವಿಚಾರಕರಾದ ಶ್ರೀಮತಿ ರವಿಶ್ರೀ ಹಾಗೂ ಸಿ.ಎಚ್.ಒ. ಶ್ರೀಮತಿ ವಾಣಿ ಹಾಗೂ ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ದಿವ್ಯರ ವರು ಉಪಸ್ಥಿತರಿದ್ದರು. ಮಕ್ಕಳು ಪ್ರಾರ್ಥಿಸಿದರು. ಪ್ರಭಾರ ಅಂಗನವಾಡಿ ಕಾರ್ಯಕರ್ತೆ ಉಷಾ ಸಂಕಡ್ಕ ರವರು ಸ್ವಾಗತಿಸಿ ದಿವ್ಯ ನವೀನ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸ್ಪರ್ಧೆ ಗಳು ನಡೆದು ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಪೋಷಕರು ಹಾಗೂ ಮಹಿಳಾ ಮಂಡಲ ವತಿಯಿಂದ ಎಲ್ಲ ಮಕ್ಕಳಿಗೂ ಊಟದ ತಟ್ಟೆ ವಿತರಿಸಲಾಯಿತು. ಆಶಾ ಕಾರ್ಯಕರ್ತೆ ಗೌರಿ ಯವರು ಧನ್ಯವಾದ ನೀಡಿದರು. ಮಹಿಳಾ ಮಂಡಲದ ನಿರ್ದೇಶಕರುಗಳಾದ ಹೇಮಾ ವಸಂತ್, ವೇದಾವತಿ ಚಿದ್ಗಲ್, ಹೊನ್ನಮ್ಮ , ಅನಸೂಯ, ಚಂದ್ರ ಭಾಸ್ಕರ ಚಿದ್ಗಲ್, ಪದ್ಮಾವತಿ, ರೋಹಿಣಿ ಕುಳ್ಳಾಜೆ, ಲೀಲಾವತಿ ಖಂಡಿಗೆ , ನಾಗವೇಣಿ ಕಕ್ಯಾನ ಹಾಗೂ ಕಾರ್ಯಕರ್ತೆ ಮಮತಾ ಹಾಗೂ ಸಹಾಯಕಿ ವಿಜಯ ಮಹಿಳಾ ಮಂಡಲ ದ ಎಲ್ಲ ಸದಸ್ಯರು ಸ್ತ್ರೀ ಶಕ್ತಿ ಯ ಸದಸ್ಯರು ಪೋಷಕರು ಭಾಗವಹಿಸಿದ್ದರು.