ನಾಗತೀರ್ಥ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳೋತ್ಸವ

0

ನಾಗತೀರ್ಥ ಅಂಗನವಾಡಿ ಕೇಂದ್ರದಲ್ಲಿ ಶ್ರೀ ದುರ್ಗಾ ಮಹಿಳಾ ಮಂಡಲ ರಿ ಕೂತ್ಕುoಜ ಹಾಗೂ ಪೋಷಕರ ವತಿಯಿಂದ ಮಕ್ಕಳೋತ್ಸವ ಕಾರ್ಯಕ್ರಮ ನಡೆಯಿತು.

ಸಭಾಧ್ಯಕ್ಷರಾದ ಪುಟಾಣಿ ಕುಮಾರಿ ರಿದನ್ಯ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಮಹಿಳಾ ಮಂಡಲದ ಕಾರ್ಯದರ್ಶಿ ಶ್ರೀಮತಿ ವೀಣಾಗಿರಿಧರ್ ಇಟ್ಯಡ್ಕ , ಅಧ್ಯಕ್ಷೆ ಹಾಗೂ ವನಿತಾ ಸಮಾಜ ಪಂಜ ಇದರ ಪೂರ್ವಾಧ್ಯಕ್ಷರಾದ ಶ್ರೀಮತಿ ಚಂದ್ರಾ ಹೊನ್ನಪ್ಪ ಚಿದ್ಗಲ್ ಹಾಗೂ ಅಂಗನವಾಡಿ ಮೇಲ್ವಿಚಾರಕರಾದ ಶ್ರೀಮತಿ ರವಿಶ್ರೀ , ಸಿ.ಎಚ್.ಒ. ಶ್ರೀಮತಿ ವಾಣಿ , ಪಂಚಾಯತ್ ಸದಸ್ಯರಾದ ಶ್ರೀಮತಿ ಪ್ರಮೀಳಾ ಶ್ರೀಮತಿ ವಿಜಯಲಕ್ಷ್ಮಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕರ್ತೆ ಸಖಿನಾಬಿ ಸ್ವಾಗತಿಸಿದರು. ಮಕ್ಕಳಿಗೆ ಸ್ಪರ್ಧೆ ಗಳು ನಡೆಯಿತು ಬಹುಮಾನ ವಿತರಿಸಲಾಯಿತು. ಪೋಷಕರು ಹಾಗೂ ಮಹಿಳಾ ಮಂಡಲದ ವತಿಯಿಂದ ಎಲ್ಲ ಮಕ್ಕಳಿಗೆ ಊಟದ ತಟ್ಟೆ ವಿತರಿಸಲಾಯಿತು ವೀಣಾ ಗಿರಿಧರ್ ಧನ್ಯವಾದ ಮಾಡಿದರು ಸಖಿನಾಬಿ ಕಾರ್ಯಕ್ರಮ ನಿರೂಪಿಸಿದರು. ಆಶಾ ಕಾರ್ಯಕರ್ತೆ ಸೆಲಿನ ಡಿ ಸೋಜ ಹಾಗೂ ಸಹಾಯಕಿ ಲಲಿತ ಕಾರ್ಯಕರ್ತೆಯವರಾದ ಮಮತ ನಾಗತೀರ್ಥ ಉಷಾ ಸಂಕಡ್ಕ ಪೋಷಕರು ,ಮಹಿಳಾ ಮಂಡಲದ ಸದಸ್ಯರು ಸ್ತ್ರೀಶಕ್ತಿ ಯ ಸದಸ್ಯರು ಹಾಗೂ ಬಾಲ ವಿಕಾಸ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.