ಐವರ್ನಾಡಿನಲ್ಲಿ ಮಾಡತ್ತಕಾನ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮುಕ್ತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ, ಪ್ರಥಮ ಫಯರ್ ಜಟ್ಟಿಪಳ್ಳ, ದ್ವಿತೀಯ ಝಮಾನ್ ಬಾಯ್ಸ್ ಕಲ್ಲಡ್ಕ

0

ಐವರ್ನಾಡಿನ ಮಾಡತ್ತಕಾನ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಜೋಯ್ ಎಂ.ನಿರಪ್ಪಿಲ್ ಪರ್ಲಿಕಜೆ ಇವರ ಪ್ರಥಮ ವರ್ಷದ ಸ್ಮರಣಾರ್ಥ ಮುಕ್ತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನ.20 ಮತ್ತು 27 ರಂದು ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.
ನ.27 ರಂದು ಫೈನಲ್ ಪಂದ್ಯಾಟ ನಡೆಯಿತು.
ಮಾಡತ್ತಕಾನ ಸ್ಪೋರ್ಟ್ಸ್ ಕ್ಲಬ್ ಸದಸ್ಯ ದುಬೈಯ ಪ್ರತಿಷ್ಟಿತ ಕಂಪೆನಿಯಾದ ಅಬ್ರೆಕೋ ಪ್ರೈಟ್ ಎಲ್.ಎಲ್.ಸಿ ಯಲ್ಲಿ ಉನ್ನತ ಉದ್ಯೋಗಿಯಾಗಿರುವ ಜೇಮ್ಸ್ ಜೋಯ್ ರವರ 50,000 ರೂಗಳ ಪ್ರಾಯೋಜಕತ್ವದಲ್ಲಿ ನಡೆಯಿತು.


ಪ್ರಥಮ ಬಹುಮಾನ ರೂ.25,000 ಹಾಗೂ ಜೋಯ್ ಮೆಮೋರಿಯಲ್ ಟ್ರೋಫಿಯನ್ನು ಫಯರ್ ಜಟ್ಟಿಪಳ್ಳ ,ದ್ವಿತೀಯ ಬಹುಮಾನ 15,000 ಹಾಗೂ ಜೋಯ್ ಮೆಮೋರಿಯಲ್ ಟ್ರೋಫಿಯನ್ನು ಝಮಾನ್ ಬಾಯ್ಸ್ ಕಲ್ಲಡ್ಕ ಪಡೆದುಕೊಂಡಿತು.
ಹಾಗೂ ಪಂದ್ಯಶ್ರೇಷ್ಟ,ಸರಣಿಶ್ರೇಷ್ಟ,ಬೆಸ್ಟ್ ಬೌಲರ್, ಬೆಸ್ಟ್ ಫೀಲ್ಡರ್ ಹಾಗೂ ಪ್ರತೀ ಪಂದ್ಯಕ್ಕೆ ಪಂದ್ಯ ಶ್ರೇಷ್ಟ ನೀಡಲಾಯಿತು.
ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಮಾಡತ್ತಕಾನ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಜುನೈದ್ ನಿಡುಬೆ ವಹಿಸಿದ್ದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಜಬಳೆ, ಮಾಡತ್ತಕಾನ ಸ್ಪರ್ಟ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಫೆಲಿಕ್ಸ್ ನಿಡುಬೆ, ಗೌರವಾಧ್ಯಕ್ಷ ಸತ್ಯನಾರಾಯಣ ಕೆದಂಬಾಡಿ, ವಾಸುದೇವ ಬೊಳುಬೈಲು,ಜೇಮ್ಸ್ ಪರ್ಲಿಕಜೆ ಉಪಸ್ಥಿತರಿದ್ದರು.
ಪಂದ್ಯಾಟದ ವೀಕ್ಷಕ ವಿವರಣೆಯನ್ನು ಸುಕುಮಾರ್ ಗುತ್ತಿಗಾರು ಹಾಗೂ ನವೀನ್ ಬಾಂಜಿಕೋಡಿ ನೀಡಿದರು.

LEAVE A REPLY

Please enter your comment!
Please enter your name here