ಗಾಂಧಿನಗರ ಜಮಾಅತ್ ವ್ಯಾಪ್ತಿಯ ಮತದಾರರ ಪಟ್ಟಿ ಪರಿಶೀಲನೆ ಅಭಿಯಾನ, ಅಭಿಯಾನ ಕೇಂದ್ರಕ್ಕೆ ತಹಶೀಲ್ದಾರ್ ಸೇರಿದಂತೆ ವಿವಿಧ ಅಧಿಕಾರಿಗಳ ಭೇಟಿ

0
101

p>

ಸುಳ್ಯ ಗಾಂಧಿನಗರ ಜಮಾಅತಿಗೆ ಸಂಬಂಧಪಟ್ಟ ಮತದಾರರ ಪಟ್ಟಿ ಪರಿಶೀಲನೆ ಮತ್ತು ಹೊಸ ಮತದಾರರ ಸೇರ್ಪಡೆ, ವರ್ಗಾವಣೆ ಇತ್ಯಾದಿ ಕಾರ್ಯಕ್ರಮಗಳ ಅಭಿಯಾನ ಇಂದು ಗಾಂಧಿನಗರ ಮುನವ್ವರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು.
ಗಾಂಧಿನಗರ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಎಂ ಅಭಿಯಾನಕ್ಕೆ ಚಾಲನೆ ನೀಡಿದರು.


ಪ್ರಧಾನ ಕಾರ್ಯದರ್ಶಿ ಕೆಬಿ ಮಜೀದ್, ಕೋಶಾಧಿಕಾರಿ ಹಾಜಿ ಮೊಯಿದ್ದೀನ್ ಫ್ಯಾನ್ಸಿ, ಮದರಸಾ ಅಧ್ಯಾಪಕರುಗಳಾದ ನಿಜಾರ್ ಸಕಾಫಿ, ಸಿರಾಜ್ ಸಕಾಫಿ, ಅಬ್ದುಲ್ ಖಾದರ್ ಮುಸ್ಲಿಯರ್, ಹಸೈನಾರ್ ಮದನಿ, ಹನೀಫ್ ಸಕಾಫಿ ಮೊದಲಾದವರು ಅಭಿಯಾನದಲ್ಲಿ ಸಹಕರಿಸಿದರು.
ಗಾಂಧಿನಗರ ಜಮಅತಿಗೆ ಒಳಪಟ್ಟ ಜಟ್ಟಿಪಳ್ಳ ಮದರಸಾ, ಅರಂಬೂರು ಮಸೀದಿ ಈ ಕೇಂದ್ರಗಳಲ್ಲಿ ಏಕಕಾಲದಲ್ಲಿ ಮತದಾರರ ಪಟ್ಟಿ ಪರಿಶೀಲನೆ ಕಾರ್ಯಕ್ರಮ ನಡೆಯಿತು.

ಪರಿಶೀಲನ ಕೇಂದ್ರಕ್ಕೆ ಸುಳ್ಯ ತಹಶೀಲ್ದಾರ್ ಕು ಅನಿತಾ ಲಕ್ಷ್ಮಿ , ನಿರೀಕ್ಷಕ ಕೊರಗಪ್ಪ ಹೆಗಡೆ, ವಿ ಎ ತಿಪ್ಪೇಶ್ ಸೇರಿದಂತೆ ಮದುವೆಯಾದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ನೀಡಿದರು.
ಮೂರು ಕೇಂದ್ರಗಳಲ್ಲಿ ಜಮಾಅತಿನ ಸದಸ್ಯರುಗಳು ಭಾಗವಹಿಸಿ ತಮ್ಮ ತಮ್ಮ ಮತ ಪಟ್ಟಿಯನ್ನು ಖಾತರಿ ಪಡಿಸಿಕೊಂಡರು. ಹೊಸ ಸೇರ್ಪಡೆಗೆ ಅರ್ಜಿಗಳನ್ನು ನೀಡಿದರು. ನೂರಾರು ಮಂದಿ ಸದಸ್ಯರು ಅಭಿಯಾನದ ಪ್ರಯೋಜನವನ್ನು ಪಡೆದುಕೊಂಡರು.

LEAVE A REPLY

Please enter your comment!
Please enter your name here