ಅಜ್ಜಾವರದಲ್ಲಿ ಗೀತಾಂಜಲಿ ಕಾರ್ಯಕ್ರಮ, ಪ್ರತಿಭೆ ಯಾವುದೇ ಜಾತಿ ಧರ್ಮದ ಸೊತ್ತಲ್ಲ : ಡಾ. ಪ್ರಭಾಕರ ಶಿಶಿಲ

0

ಪ್ರತಿಭೆ ಎನ್ನುವುದು ಯಾವುದೇ ಜಾತಿ ಧರ್ಮ ಬಣ್ಣದ ಸೊತ್ತಲ್ಲ ಎಂದು ಸುಳ್ಯದ ವಿಶ್ರಾಂತ ಪ್ರಾಂಶುಪಾಲ ಹಾಗೂ ಖ್ಯಾತ ಲೇಖಕ ಡಾ.ಪ್ರಭಾಕರ ಶಿಶಿಲ ಹೇಳಿದರು.

ಅವರು ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಗೀತಾಜಯಂತಿ ಕಾರ್ಯಕ್ರಮ ಹಾಗೂ ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 187 ನೇ ಕೃತಿ ಧ್ಯಾನದಿಂದ ಆತ್ಮದರ್ಶನ ವನ್ನು ಬಿಡುಗಡೆಗೊಳಿಸಿ ಮಾತನಾಡಿದರು.


ಭಗವದ್ಗೀತೆ ಜಗತ್ತಿಗೆ ಶ್ರೇಷ್ಠ ಸಂದೇಶ ನೀಡಿದೆ.ಇದು ನನ್ನ ವೈಯಕ್ತಿಕ ಜೀವನದಲ್ಲೂ ಪ್ರಯೋಜನವಾಗಿದೆ.ಮೇಲು ಕೀಳು ಎಂಬ ಭಾವನೆಯನ್ನು ಹಿಂದು ಧರ್ಮದಲ್ಲಿ ಬಿಟ್ಟರೆ ಹಿಂದು ಧರ್ಮ ಸರ್ವ ಶ್ರೇಷ್ಠ ಎಂದು ಅವರು ಹೇಳಿದರು.
ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಾಂದ ಸರಸ್ವತಿಯವರು ಮಾತನಾಡಿ ನಾವು ಜೀವನದಲ್ಲಿ ಸತ್ಯ ಸನ್ಮಾರ್ಗದಲ್ಲಿ ನಡೆಯಬೇಕು.ಸತ್ಯಕ್ಕೆ ನಿರಂತರ ಜಯ ಇದೆ ಎಂದು ಹೇಳಿದರು.

ಸುಳ್ಯದ ಕೆ.ವಿ.ಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರೊಪೇಸರ್ ಡಾ.ಹರ್ಷವರ್ಧನ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಆಶ್ರಮದ ಟ್ರಸ್ಟಿಗಳಾ ಪ್ರೋ. ಅನಿಲ್ ಬಿ.ವಿ ಸ್ವಾಗತಿಸಿ .ಪ್ರಣವಿ ವಂದಿಸಿದರು.ಪ್ರೋ.ರೇಖಾ ಕಾರ್ಯಕ್ರಮ ನಿರೂಪಿಸಿದರು
ಶ್ರೀ ಭಗವದ್ಗೀತೆ ವಾಚನ ಮತ್ತು ಭಜನಾ ಸತ್ಸಂಗ ಕಾರ್ಯಕ್ರಮ ನಡೆಯಿತು.