ಚಿತ್ರ ಮಂದಿರದ ಬಳಿ ಧರ್ಮದೇಟು ಪ್ರಕರಣ: ಏಟು ತಿಂದ ವಿದ್ಯಾರ್ಥಿಯಿಂದ ಐವರ ಮೇಲೆ ಪೊಲೀಸ್ ದೂರು

0

ಸುಳ್ಯದ ಸಂತೋಷ್ ಚಿತ್ರ ಮಂದಿರದ ಪಾರ್ಕಿಂಗ್ ಸ್ಥಳದಲ್ಲಿ ಏಟು ತಿಂದ ವಿದ್ಯಾರ್ಥಿ ಐವರ ವಿರುದ್ಧ ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

ನಿನ್ನೆ ಕಾಂತಾರ ಸಿನೆಮಾ ವೀಕ್ಷಣೆಗೆಂದು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಬಂದಿದ್ದ ವೇಳೆ ಪಾರ್ಕಿಂಗ್ ಸ್ಥಳದಲ್ಲಿ ಇವರು ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿ ತಂಡವೊಂದು ಪ್ರಶ್ನಿಸಿ ವಿದ್ಯಾರ್ಥಿಗೆ ಹೊಡೆದಿದ್ದರು. ಏಟು ತಿಂದ ವಿದ್ಯಾರ್ಥಿ ಬಂಟ್ವಾಳ ಕೈಕಂಬದ ಮೊಹಮ್ಮದ್ ಇಮ್ತಿಯಾಜ್ ಇಂದು ಇಮೇಲ್ ಮುಖಾಂತರ ಸುಳ್ಯ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ನನ್ನ ಗೆಳತಿಯೊಂದಿಗೆ ಸಂತೋಷ್ ಥಿಯೇಟರ್ ಪಾರ್ಕಿಂಗ್ ಸ್ಥಳದಲ್ಲಿ ಮಾತನಾಡುತ್ತಿದ್ದಾಗ ಆರೋಪಿಗಳಾದ ಅಬ್ದುಲ್ ಹಮೀದ್, ಅಶ್ರಫ್, ಸಾದಿಕ್, ಜಾಬೀರ್ ಜಟ್ಟಿಪ್ಪಳ್ಳ, ಸಿದ್ದೀಕ್ ಬೋರುಗುಡ್ಡೆ ನಮಗೆ ಹೊಡೆದು ಜೀವ ಬೆದರಿಕೆ ಒಡ್ಡಿದ್ದಾರೆಂದು ದೂರು ನೀಡಿದ್ದಾರೆ.