ಸುಳ್ಯದಲ್ಲಿ ಅಯ್ಯಪ್ಪ ಸ್ವಾಮಿಯ 28 ನೇ ದೀಪೋತ್ಸವಕ್ಕೆ ಅಯ್ಯಪ್ಪ ವೃತಧಾರಿಗಳಿಂದ 28 ದೀಪ ಪ್ರಜ್ವಲಿಸಿ ಚಾಲನೆ

0

ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಆಶ್ರಯದಲ್ಲಿ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ 28 ನೇ ವರ್ಷದ ದೀಪೋತ್ಸವಕ್ಕೆ ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಡಿ.ಆರ್. ಕೆಂಚಪ್ಪ ಗುರುಸ್ವಾಮಿ ಯವರ ನೇತೃತ್ವದಲ್ಲಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಪ್ರಾತ:ಕಾಲ ಪುರೋಹಿತ್ ನಾಗರಾಜ ಭಟ್ ರವರ ನೇತೃತ್ವದಲ್ಲಿ ಆರಂಭದಲ್ಲಿ ಅಯ್ಯಪ್ಪ ಸ್ವಾಮಿ ವೃತಧಾರಿಗಳಿಂದ 28 ನೇ ವರ್ಷದ ದೀಪೋತ್ಸವ ಸಲುವಾಗಿ ವಿಶೇಷವಾಗಿ 28 ದೀಪಗಳನ್ನು ಪ್ರಜ್ವಲಿಸಿ ಚಾಲನೆ ನೀಡಲಾಯಿತು. ಬಳಿಕ ಗಣಪತಿ ಹವನ ನಡೆದು ಉಷಾ ಪೂಜೆಯು ನೆರವೇರಿತು. ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿ ಅಯ್ಯಪ್ಪ ವೃತಧಾರಿಗಳು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.ಇಂದು
ರಾತ್ರಿ ಅಯ್ಯಪ್ಪ ವೃತಧಾರಿಗಳಿಂದ ಪಾಲ್ ಕೊಂಬು ಮೆರವಣಿಗೆ ಬಂದು ಮೆಲೇರಿಗೆ ಅಗ್ನಿ ಸ್ಪರ್ಶವಾಗಿ ನಾಳೆ ಪ್ರಾತ:ಕಾಲ ಅಗ್ನಿ ಸೇವೆಯು ನಡೆಯಲಿದೆ.