ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯಕ್ಕೆ ರಜತ ಸಂಭ್ರಮ, ಡಿ.16, 17, 18 ರಂದು ಅದ್ದೂರಿ ಕುಮಾರ ಪರ್ವ ಕಾರ್ಯಕ್ರಮ, ಕ್ರೀಡಾಂಗಣ ಲೋಕಾರ್ಪಣೆ, ಕುಮಾರ ನಾಯರ್ ಸಂಸ್ಮರಣೆ ಸಹಿತ ಹಲವು ಕಾರ್ಯಕ್ರಮ

0

ಕುಕ್ಕೆ ಸುಬ್ರಹ್ಮಣ್ಯದ ಅನುಗ್ರಹ ಎಜ್ಯುಕೇಶನ್ ಟ್ರಸ್ಟ್ ಪ್ರವರ್ತಿತ ಕುಮಾರಸ್ವಾಮಿ ವಿದ್ಯಾಲಯ 25 ವರ್ಷ ಪೂರೈಸಿದ್ದು ಈ ನಿಟ್ಟಿನಲ್ಲಿ ರಜತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.

ಆಂಗ್ಲಮಾಧ್ಯಮ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ,
ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವತಿಯಿಂದ
25 ರಜತ ಸಂಭ್ರಮ
ಕುಮಾರ ಪರ್ವ-2022 ಕಾರ್ಯಕ್ರಮ
ಡಿ.16, 17, 18 ರಂದು ನಡೆಯಲಿದೆ. ಈ ಬಗ್ಗೆ ಪತ್ರಿಕಾ ಗೋಷ್ಠಿ ನಡೆಸಿದ ಅನುಗ್ರಹ ಎಜ್ಯುಕೇಶನ್ ಟ್ರಸ್ಟ್‌ ಅಧ್ಯಕ್ಷ ಗಣೇಶ್ ನಾಯರ್ ಅವರು ಮಾಹಿತಿ ನೀಡಿ ಕಾರ್ಯಕ್ರಮ ಬಗ್ಗೆ ವಿವರಿಸಿದ್ದಾರೆ. 1996 ರಲ್ಲಿ ಕುಮಾರ್ ನಾಯರ್ ಅವರು ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು ಎನ್ನುವ ಉದ್ದೇಶದಿಂದ ಕುಮಾರಸ್ವಾಮಿ ವಿದ್ಯಾಲಯ ಸ್ಥಾಪನೆಯಾಗಿದೆ. ಇದೀಗ ಸಂಸ್ಥೆಗೆ 27 ವರ್ಷವಾಗುತಿದ್ದರೂ ಕೋರೋನಾ ಹಿನ್ನೆಲೆಯಲ್ಲಿ ಸ್ವಲ್ಪ ತಡವಾಗಿ ಬೆಳ್ಳಿ ಹಬ್ಬ ಆಚರಿಸುತಿದ್ದೇವೆ. ಶಾಲೆಯ ಉದ್ಘಾಟನಾ ಸಮಾರಂಭಕ್ಕೆ ಶಾಸಕ ಎಸ್ ಅಂಗಾರ ಅಧ್ಯಕ್ಷತೆ ವಹಿಸಿದ್ದರು. 27 ವರ್ಷಗಳ ಬಳಿಕದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡ ಸಚಿವ ಎಸ್. ಅಂಗಾರರೇ ವಹಿಸಲಿದ್ದಾರೆ ಎಂದರು. ಮೂರು ದಿನ ನಿರಂತರ ಕಾರ್ಯಕ್ರಮ ನಡೆಯಲಿದ್ದು ವಿವಿಧ ಗಣ್ಯರು ಅತಿಥಿಗಳು ಭಾಗವಹಿಸಲಿದ್ದಾರೆ. ಮೂರನೆ ದಿನ ವೈಭವದ ಮೆರವಣಿಗೆ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ಕುಮಾರ್ ನಾಯರ್ ಹಾಗೂ ದೇಶದ ಪ್ರಥಮ ಶಿಕ್ಷಕಿ, ಸ್ವಾತಂತ್ರ್ಯ ಹೋರಾಟ ಗಾರ್ತಿ ಸಾವಿತ್ರಿ ಬಾಯಿ ಪುಳೆ ಟ್ಯಾಬ್ಲೊ ಇರಲಿದೆ ಎಂದರು. ವಿವಿಧ ಸಾಂಸ್ಕೃತಿಕ ಕಾರ್ಯ ನಡೆಯಲಿದ್ದು ನಮ್ಮ ಶಾಲಾ ಪ್ರತಿಯೋರ್ವ ವಿದ್ಯಾರ್ಥಿ ವೇದಿಕೆಗೆ ಬರಲಿದ್ದಾರೆ. ಅಲ್ಲದೆ ಹಿರಿಯ ವಿದ್ಯಾರ್ಥಿಗಳು, ಪೋಷಕರೂ ವೇದಿಕೆಯಲ್ಲಿ ಕಾರ್ಯಕ್ರಮ ನೀಡಲಿದ್ದಾರೆ.


ರಜತ ವರ್ಷ ಕಾರ್ಯಕ್ರಮ ಹಿನ್ನೆಲೆಯಲ್ಲಿ ಶಾಲಾ ಕ್ರೀಡಾಂಗಣ ಸುಮಾರು 35 ಲಕ್ಷ ವೆಚ್ಚ ಮಾಡಿ ಮರು ನಿರ್ಮಾಣವಾಗಿ ವಿಸ್ತಾರವಾಗಿದ್ದು ಅದರ ಲೋಕರ್ಪಣೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ನಮ್ಮ ಅಶಯದಂತೆ ಪ್ರತಿ ವರ್ಷ ನಾವು ನಡೆಸುವ ಸನ್ಮಾನ ಕಾರ್ಯಕ್ರಮದಂತೆ ಈ ವರ್ಷ 23 ಸಾವಿರ ಹೆರಿಗೆಯನ್ನು ಮಾಡಿಸಿರುವ ಖ್ಯಾತಿಯನ್ನು ಹೊಂದಿದ್ದು,53 ವರ್ಷಗಳ ವೈದ್ಯ ಸೇವೆಯನ್ನು ನೀಡುತ್ತಿರುವ ಕಡಬದ ಡಾ। ಸಿ.ಕೆ ಶಾಸ್ತ್ರಿ ಅವರನ್ನು ಕುಮಾರ್ ನಾಯರ್ ಸಾಧನಾ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮ ನಡೆಯಲಿದೆ ಎಂದರು.
ಕುಮಾರ ಪರ್ವ ಕಾರ್ಯಕ್ರಮದ ಪ್ರಯುಕ್ತ ನಮ್ಮ ಸಂಸ್ಥೆಯಲ್ಲಿ ಓದಿದ ಪ್ರತಿ ಹಿರಿಯ ವಿದ್ಯಾರ್ಥಿಗಳ ಮನೆ ಭೇಟಿ ಮಾಡಿದ್ದೇವೆ ಅವರ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಮತ್ತು ಈಗ ಹೇಗಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ ಎನ್ನುತ್ತಾ ಕುಮಾರ ಪರ್ವ ಬೆಳ್ಳಿ ಹಬ್ಬ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೇಳಿಕೊಂಡರು.

ರಜತ ಸಂಭಮದ ಅಧ್ಯಕ್ಷ ಶಿವರಾಮ ಏನೆಕಲ್ಲು ಮಾತನಾಡಿ 25 ವರ್ಷ ಪೂರ್ಣ ಗೊಂಡ ಸಲುವಾಗಿ ಈ ವರ್ಷ ಪಿ.ಯು ತರಗತಿ ಆರಂಭ ಮಾಡಿದ್ದೇವೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಿವೆ, ಬೆರಳೆಣಿಕೆಯ ಮಕ್ಕಳಿದ್ದ ಶಾಲೆ ಹೆಮ್ಮರವಾಗಿ ಬೆಳೆದಿದೆ. ಇದಕ್ಕೆ ಆಡಳಿತ ಮಂಡಳಿಯನ್ನು ಶ್ಲಾಘಿಸಿದರು.

ಮುಖ್ಯೋಪಾಧ್ಯಾಯಿನಿ ವಿದ್ಯಾರತ್ನ ಮಾತನಾಡಿ ಆರಂಭದಲ್ಲಿ 18 ಮಕ್ನಳು, ಒಂದು ಶಿಕ್ಷಕಿಯಿದ್ದ ಶಾಲೆಯಲ್ಲಿ ಇಂದು 1038 ವಿದ್ಯಾರ್ಥಿಗಳಿದ್ದಾರೆ, 45 ಶಿಕ್ಷಕರಿದ್ದಾರೆ ಎಂದು ಮಾಹಿತಿ ನೀಡಿದರು.

ಶಾಲಾ ಸಂಚಾಲಕ ಚಂದ್ರ
ಶೇಖರ ನಾಯರ್, ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ಶಿಕ್ಷಕ ಉಮೇಶ್ ಶೆಟ್ಟಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಡಿ.16 ರಂದು ಪೂ. 9.30 ಕ್ಕೆ
ಶಾಲಾ ಧ್ವಜಾರೋಹಣ ನಡೆಯಲಿದ್ದು ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ
ಶ್ರೀಮತಿ ಲಲಿತಾ ಗುಂಡಡ್ಕ ನೆರವೇರಿಸಲಿದ್ದಾರೆ
ಅಪರಾಹ್ನ 2.00ರಿಂದ
ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನೆರವೇರಲಿದೆ.
ಸಂಜೆ ಸಭಾ ಕಾರ್ಯಕ್ರಮ ನಡೆದು ಕುಮಾರ ಪರ್ವ 2022 ಕಾರ್ಯಕ್ರಮ ಉದ್ಘಾಟನೆ ಗೊಳ್ಳಲಿದೆ. ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನ, ಹೊರನಾಡು ಇದರ ಧರ್ಮಕರ್ತರು, ಆದಿಶಕ್ತ್ಯಾತ್ಮಕ,
ಶ್ರೀ ಭೀಮೇಶ್ವರ ಜೋಶಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮೀನುಗಾರಿಕೆ ಬಂದರು ಮತ್ತು ಒಳನಾಡು, ಜಲಸಾರಿಗೆ ಸಚಿವರರಾದ ಎಸ್. ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ ಹಾಗೂ
ಶಾಲಾ ಕ್ರೀಡಾಂಗಣದ ತಡೆ ಗೋಡೆಗೆ ಶಿಲಾನ್ಯಾಾಸ ನೆರವೇರಿಸಲಿದ್ದಾರೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ “ಚಿಗುರು’’ ಹಸ್ತಪತ್ರಿಕೆ ಬಿಡುಗಡೆ ಮಾಡಲಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್, ಪಿ. ಮಹಾದೇವ “ಮಂಥನ’’ ಮಾಹಿತಿ ಸಂಗ್ರಹದ ಬಿಡುಗಡೆ ಮಾಡಲಿದ್ದಾರೆ. ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಲಲಿತಾ ಗುಂಡಡ್ಕ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಕಿಶೋರ್ ಕುಮಾರ್ ಕೂಜುಗೋಡು ಅವರ ಗೌರವ ಉಪಸ್ಥಿತಿ ಇರಲಿದೆ.
ಕಾರ್ಯಕ್ರಮದಲ್ಲಿ
ಕುಮಾರ್ ನಾಯರ್ ಸಾಧನಾ ಪ್ರಶಸ್ತಿ ನೀಡಿ ಹಿರಿಯ ವೈದ್ಯ ಡಾ ಸಿ. ಕೆ. ಶಾಸ್ತ್ರಿ ಪುರಸ್ಕರಿಸಲಿದ್ದಾರೆ. ಬಳಿಕ ಸಂಜೆ 5.00 ರಿಂದ
ವಿದ್ಯರ್ಥಿಗಳಿಂದ
ಸಾಂಸ್ಕೃತಿಕ
ಕಾರ್ಯಕ್ರಮ ನಡೆದು
ಸಂಜೆ 6.00 ರಿಂದ ಸಂಗೀತ ವಿದ್ಯಾನಿಧಿ ಡಾ. ವಿದ್ಯಾಭೂಷಣರಿಂದ
ಭಕ್ತಿಸಂಗೀತ ನಡೆಯಲಿದೆ. ಬಳಿಕ ವಿದ್ಯಾರ್ಥಿಗಳಿಂದ
ಹಾಗೂ ಪೋಷಕರಿಂದ
ಸಾಂಸ್ಕೃತಿಕ
ಕಾರ್ಯಕ್ರಮ ಜರುಗಲಿದೆ.

ಡಿ. 17 ರಂದು ಸಂಸ್ಮರಣಾ ಸಮಾರಂಭ ನಡೆಯಲಿದ್ದು
ಪೂ.9.30ರಿಂದ ಕಾರ್ಯಕ್ರಮ ಜರುಗಲಿದೆ.
ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ದಿವಾನರಾದ ಸುದರ್ಶನ ಜೋಯಿಸ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ
ಶಾಲಾ ವಿದ್ಯಾರ್ಥಿಗಳಿಂದ
ಸುಗಮ ಸಂಗೀತ ನಡೆಯಲಿದೆ. ಬಳಿಕ ಶಾಲಾ ವಿದ್ಯಾಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಶಾಲಾ ವಿದ್ಯಾರ್ಥಿಗಳಿಂದ
ಯಕ್ಷಗಾನ “ದಕ್ಷಯಜ್ಞ” ನಡೆಯಲಿದೆ.
ಅಪರಾಹ್ನ 5.00 ರಿಂದ
ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು
ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀಸುಬ್ರಹ್ಮಣ್ಯ ಮಠದ ಶ್ರೀಗಳಾದ ವಿದ್ಯಾಪ್ರಸನ್ನತೀರ್ಥ ಸ್ವಾಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಕರ್ನಾಟಕ ಸರಕಾರ ಮಾಜಿ ಸಚಿವ, ರಮಾನಾಥ ರೈ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯ ಅಧ್ಯಕ್ಷ ಡಾ ಕೆ.ವಿ. ಚಿದಾನಂದ
ಅಧ್ಯಕ್ಷತೆ ವಹಿಸಲಿದ್ದಾರೆ.
ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ
ಸ್ಥಾಪಕ ಕೆ. ಸೀತಾರಾಮ ರೈ
ಪುಸ್ತಕದ ಮಂಟಪ ಅನಾವರಣ ಮಾಡಲಿದ್ದಾರೆ. ವಿಜಯವಾಣಿ ವರದಿಗಾರ, ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘ ಸದಸ್ಯ ಪಿ. ಬಿ. ಹರೀಶ್ ರೈ ಸಂಸ್ಮರಣಾ ಮಾತು ಆಡಲಿದ್ದಾರೆ. ಕಾರ್ಯಕ್ರಮದಲ್ಲಿ
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ
ಮಾಜಿ ಅಧ್ಯಕ್ಷ ಶ್ರೀ ನಿತ್ಯಾನಂದ ಮುಂಡೋಡಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮ ಜರುಗಲಿದೆ.
ಸ್ಮರಣ ಸಂಚಿಕೆ ಸಂಪಾದಕರು, ಸುದ್ದಿ ಚಾನಲ್ ಮುಖ್ಯಸ್ಥರೂ ಆದ ದುರ್ಗಾಕುಮಾರ್ ನಾಯರ್‌ಕೆರೆ ವೇದಿಕೆಯಲ್ಲಿ ಇರಲಿದ್ದಾರೆ.ಬಳಿಕ
ಶಾಲಾ ವಿದ್ಯಾರ್ಥಿಗಳಿಂದ
ನಾಟಕ “ಗ್ರಂಥಾಯಣ” ನಡೆಯಲಿದೆ.
ವಿದ್ಯಾ ರ್ಥಿಗಳಿಂಧ
ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು. ರಾತ್ರಿ9.00 ರಿಂದ
ಶ್ರೀಮತಿ ಅಲಕಾ ಸುಬ್ರಹ್ಮಣ್ಯ
ಮತ್ತು ತಂಡ ಬೆಂಗಳೂರು
ಇವರಿಂದ
ಡ್ಯಾನ್ಸ್ ಫಿಯೆಸ್ಟಾ ನಡೆಯಲಿದೆ.
ಡಿ.18 ಮೂರನೇ ದಿನ
ಸಮಾರೋಪ ಸಮಾರಂಭ ನಡೆಯಲಿದೆ.
ಪೂರ್ವಾಹ್ನ 9.30ರಿಂದ
“ರಜತ ಜಾಥಾ” ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾ ನದ ರಥಬೀದಿಯಿಂದ ಶಾಲೆಯವರೆಗೆ ನಡೆಯಲಿದ್ದು
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ವನಜಾ ವಿ. ಭಟ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಪೂರ್ವಾಹ್ನ 11.00 ರಿಂದ
ಹಿರಿಯ ವಿದ್ಯಾರ್ಥಿಗಳ
ಸ್ನೇಹ ಸಮ್ಮಿಲನ ನಡೆದು
ಅಪರಾಹ್ನ 2.00ರಿಂದ
ವಿದ್ಯಾರ್ಥಿಗಳಿಂದ ಹಾಗೂ
ಹಿರಿಯ ವಿದ್ಯಾರ್ಥಿಗಳಿಂದ
ಸಾಂಸ್ಕೃತಿಕ
ಕಾರ್ಯಕ್ರಮ ಜರುಗಲಿದೆ.
ಸಂಜೆ
ನೂತನ ಶಾಲಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಜರುಗಲಿದ್ದು ಮಂಗಳೂರು ಲೋಕಸಭಾ ಕ್ಷೇತ್ರ ದ ಸಂಸದ ನಳಿನ್‌ಕುಮಾರ್ ಕಟೀಲ್ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಶ್ವಿಧಾನಪರಿಷತ್ ಸದಸ್ಯ ಭೋಜೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾನ್ಯ , ಮಂಗಳೂರು ವಿಶ್ವವಿದ್ಯಾಾನಿಲಯ ಉಪಕುಲಪತಿಗಳಾದ ಪಿ ಸುಬ್ರಹ್ಮಣ್ಯ ಎಡಪಡಿತ್ತಾಯ ಸಮಾರೋಪ ಭಾಷಣ ಮಾಡಲಿದ್ದು
ಮುಖ್ಯ ಅತಿಥಿಗಳಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ ನಿಂಗಯ್ಯ, ಹಿರಿಯ ಸಹಕಾರಿ ಜಾಕೆ ಮಾಧವ ಗೌಡ,
ಭಾರತೀಯ ರಬ್ಬರ್ ಮಂಡಳಿ ನಿರ್ದೇಶಕ ಮುಳಿಯ ಕೇಶವ ಭಟ್ ಭಾಗವಹಿಸಲಿದ್ದಾರೆ. ಬಳಿಕ ಗುರುವಂದನೆ ಹಾಗೂ ಸಾಧಕರನ್ನು ಗುರುತಿಸುವ ಕಾರ್ಯಕ್ರಮ ಜರುಗಲಿದೆ.
ಬಳಿಕ
ಸಂಸ್ಥೆಯ ವಿದ್ಯಾಾರ್ಥಿಗಳಿಂದ
ನಾಟಕ ” ಬ್ಲ್ಯಾಕ್ ಅಂಡ್ ವೈಟ್” ನಾಟಕ ನಡೆದು
ನೃತ್ಯ ಪ್ರದರ್ಶನ ನಡೆಯಲಿದೆ.
ರಾತ್ರಿ 9.00 ರಿಂದ
ವೈಷ್ಣವಿ ಕಲಾವಿದರ ಕೊಯಿಲ
ಬಂಟ್ವಾಾಳ ಇವರಿಂದ
“ಕುಸಲ್ದ ಗೌಜಿ”
ತುಳು ಹಾಸ್ಯಮಯ
ಕಾರ್ಯಕ್ರಮ ನಡೆದು
ಶಿಕ್ಷಕರಿಂದ
ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.