ಪೆರಾಜೆ ಕಲ್ಚೆರ್ಪೆಯ ಸಿರಿ ಕುರಲ್ ನಗರದ ವನದುರ್ಗೆ ರಕ್ತೇಶ್ವರೀ ಸಾನಿಧ್ಯದಲ್ಲಿ ವನಶ್ರೀ ನೂತನ ಸಭಾಭವನದ ಉದ್ಘಾಟನಾ ಸಮಾರಂಭ, ರಂಜಿಸಿದ ಜೂನಿಯರ್ ವಿಷ್ಣುವರ್ಧನ್ ಸಂಗೀತ ರಸಸಂಜೆ- ಸುಳ್ಯ ವಿಷ್ಣುವರ್ಧನ್ ಅಭಿಮಾನಿಗಳ ಆಯೋಜನೆ

0

ಆಲೆಟ್ಟಿ ಗ್ರಾಮದ ಕಲ್ಚೆರ್ಪೆ ಪೆರಾಜೆಯ ಸಿರಿಕುರಲ್ ನಗರದ ಶ್ರೀ ವನದುರ್ಗಾ ಮತ್ತು ರಕ್ತೇಶ್ವರೀ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ 5 ನೇ ವರ್ಷದ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ನೂತನವಾಗಿ ನಿರ್ಮಾಣಗೊಂಡ ವನಶ್ರೀ ಕಟ್ಟಡದ ಮತ್ತು ಆಡಳಿತ ಕಚೇರಿ ಮತ್ತು ಸಭಾಭವನ, ಪಾಕಶಾಲೆ,ಸ್ವಾಗತ ದ್ವಾರ, ಉದ್ಯಾನವನದ ಉದ್ಘಾಟನಾ ಸಮಾರಂಭವು ಡಿ.11 ರಂದು ನಡೆಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ರವರು ವಹಿಸಿ ದೀಪ ಪ್ರಜ್ವಲಿಸಿ ಸಮಾರಂಭವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ಉಬರಡ್ಕ ಮಿತ್ತೂರು ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ರೈ ಉಬರಡ್ಕ, ಸುಳ್ಯ ನಗರ ಪಂಚಾಯತ್ ನಾಮ ನಿರ್ದೇಶನ ಸದಸ್ಯ ಬೂಡು ರಾಧಾಕೃಷ್ಣ ರೈ, ಪೆರಾಜೆ ಶಾಸ್ತಾವೇಶ್ವರ ದೇವಸ್ಥಾನ ದ ವ್ಯ.ಸ.ಅಧ್ಯಕ್ಷ ಜಿತೇಂದ್ರ ನಿಡ್ಯಮಲೆ, ಕೆ.ಪಿ.ಸಿ.ಸಿ.ಸದಸ್ಯ ಹೆಚ್‌ಎಂ.ನಂದಕುಮಾರ್, ಸುಳ್ಯ ಕೆ.ವಿ.ಜಿ.ಹಬ್ಬ ಸಮಿತಿ ಅಧ್ಯಕ್ಷ ದೊಡ್ಡಣ್ಣ ಬರೆಮೇಲು, ಆ್ಯಂಕರ್ ಕಂಪೆನಿಯ ಉದ್ಯೋಗಿ ನವೀನ್ ಚಂದ್ರ ಬೆಂಗಳೂರು,ಸುಳ್ಯ ಎಸ್.ಸಿಕ್ಸ್ ಅಧ್ಯಕ್ಷ ಚಿದಾನಂದ ವಿದ್ಯಾನಗರ, ಸಮಾಜ ರತ್ನ ಪ್ರಶಸ್ತಿ ಪುರಸ್ಕೃತ ಮಂಜುನಾಥ ಮೇಸ್ತ್ರಿ ಬಳ್ಳಾರಿ, ಆಡಳಿತ ಸಮಿತಿ ಅಧ್ಯಕ್ಷ ಗೋಕುಲ್ ದಾಸ್, ಸಂಚಾಲಕ ಅಶೋಕ ಪೀಚೆಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು.ಜನಿಕಾ ಮತ್ತು ಜಗನ್ ಕಲ್ಚೆರ್ಪೆ ಪ್ರಾರ್ಥಿಸಿದರು. ಅಶೋಕ ಪೀಚೆಮನೆ ಸ್ವಾಗತಿಸಿ, ವಂದಿಸಿದರು. ಗೋಕುಲ್ ದಾಸ್ ಪ್ರಾಸ್ತಾವಿಕ ಮಾತನಾಡಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಗೋಕುಲ್ ದಾಸ್ ಮತ್ತು ಮಕ್ಕಳ ಪರವಾಗಿ ರೂ.25,000/- ಚೆಕ್ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಬ್ರಹ್ಮ ಕಲಶೋತ್ಸವ ಸಮಿತಿ ಖಜಾಂಜಿ ಹರೀಶ್ ರೈ ಯವರಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದ ಪ್ರಯುಕ್ತ ಸುಳ್ಯ ವಿಷ್ಣುವರ್ಧನ್ ಅಭಿಮಾನಿ ಬಳಗದ ಪ್ರಾಯೋಜಕತ್ವದಲ್ಲಿ ಜೂನಿಯರ್ ವಿಷ್ಣುವರ್ಧನ್ ಖ್ಯಾತಿಯ ಅಪೇಕ್ಷ ಮಂಜುನಾಥ ಭದ್ರಾವತಿ ಮತ್ತು ಬಳಗದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ರಾತ್ರಿ ಅನ್ನ ಸಂತರ್ಪಣೆಯಾಯಿತು.
ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.