ಕಾಣೆಯಾಗಿದ್ದ ಬಾಲಕಿ ಪತ್ತೆ, ಉಜಿರಡ್ಕ ಶ್ರೀ ಕೊರಗಜ್ಜ ಸನ್ನಿಧಿಯಲ್ಲಿ ಹರಕೆಯ ಕೋಲ ಪೂರೈಕೆ

0

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಭಾರ್ಗವಿ ಎಂಬ ಬಾಲಕಿ ಇತ್ತೀಚೆಗೆ ಕಾಣೆಯಾಗಿದ್ದು, ಈ ಸಂದರ್ಭದಲ್ಲಿ ಅವರ ಸುಬ್ರಹ್ಮಣ್ಯದ ಸಂಬಂಧಿಕರು ನಾಲ್ಕೂರು ಗ್ರಾಮದ ಉಜಿರಡ್ಕ ಶ್ರೀ ಸ್ವಾಮಿ ಕೊರಗಜ್ಜನ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ಕಾಣೆಯಾದ ಹುಡುಗಿ ಶೀಘ್ರ ಪತ್ತೆಯಾಗುವಂತೆ ಕೋರಿದ್ದರು.

ಆ ಸಂದರ್ಭ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಪಾತ್ರಿ ಅಂದು ಸಂಜೆಯೊಳಗೆ ಬಾಲಕಿ ಪತ್ತೆಯಾಗುತ್ತಾರೆ ಎಂಬುವುದಾಗಿ
ಅಭಯ ನುಡಿದಿದ್ದರು.

ಬಾಲಕಿ ಪತ್ತೆಯಾದಲ್ಲಿ ಕೊರಗಜ್ಜನಿಗೆ ಕೋಲ ಕೊಡುವುದಾಗಿ ಸಂಬಂಧಿಕರು ಪ್ರಾರ್ಥಿಸಿದ್ದರು.
ಅದರಂತೆ ಅಂದು ಸಂಜೆ ಭಾರ್ಗವಿ ಗೋವಾದಲ್ಲಿ ಪತ್ತೆಯಾಗಿದ್ದರು. ಅಂದು ಹೇಳಿದ ಹರಕೆಯ ಸೇವೆಯಂತೆ ಡಿ. 11ರಂದು ಭಾರ್ಗವಿ ಮತ್ತು ಪೋಷಕರಿದ್ದು ಉಜಿರಡ್ಕ ಸ್ವಾಮಿ ಕೊರಗಜ್ಜನಿಗೆ ಹರಕೆಯ ಕೋಲ ನಡೆಯಿತು. ಈ ಸಂದರ್ಭ ಭಾರ್ಗವಿ ಅವರ ಮನೆಯವರು, ಬಂಧುಗಳು, ಕೆಪಿಸಿಸಿ ಸದಸ್ಯ ನಂದಕುಮಾರ್, ಕೊರಗಜ್ಜ ಸಾನಿಧ್ಯದ ಸುರೇಶ್ ಉಜಿರಡ್ಕ ಮತ್ತಿತರರು ಉಪಸ್ಥಿತರಿದ್ದರು.