ಕಳಂಜ ವಿಷ್ಣುನಗರದಲ್ಲಿ ಶ್ರೀ ದೇವಿ ಮಹಾತ್ಮೆ, ಸಾಧಕರಿಗೆ ಸನ್ಮಾನ

0


ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ
ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಶ್ರೀಮತಿ ಕಾತ್ಯಾಯಿನಿ ಮತ್ತು ಶ್ರೀ ಸುಭಾಶ್ಚಂದ್ರ ರೈ ಮತ್ತು ಮನೆಯವರು ತೋಟ, ಬಾಳಿಲ ಇವರ ಸೇವಾ ರೂಪದ
ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಡಿ.12ರಂದು ಸಂಜೆ ಕಳಂಜ ವಿಷ್ಣುನಗರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮೇಳದ ಸಾರಥ್ಯವನ್ನು ವಹಿಸಿರುವ ಪಟ್ಲ ಸತೀಶ್ ಶೆಟ್ಟಿ, ಕಲಾವಿದರಾದ ಮಾಧವ ಬಂಗೇರ ಕೊಳತ್ತಮಜಲು, ರಾಧಾಕೃಷ್ಣ ನಾವುಡ ಮಧೂರು, ಹಿಮ್ಮೇಳ ಭಾಗವತರಾದ ಪ್ರಪುಲ್ಲಚಂದ್ರ ನೆಲ್ಯಾಡಿ, ಚೆಂಡೆ ಮದ್ದಳೆ ವಾದಕರಾದ ಪ್ರಶಾಂತ್ ಶೆಟ್ಟಿ ವಗೆನಾಡು, ಮತ್ತು ಸಿಬ್ಬಂದಿಗಳಾದ ರಘು ಶೆಟ್ಟಿ ನಾಳ ಮತ್ತು ರಮೇಶ್ ಜೋಗಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಯಕ್ಷಗಾನದ ಸೇವಾ ಕರ್ತೃಗಳಾದ ಶ್ರೀಮತಿ ಕಾತ್ಯಾಯಿನಿ ಸುಭಾಶ್ಚಂದ್ರ ರೈ ತೋಟ, ಸುಭಾಶ್ಚಂದ್ರ ರೈ ತೋಟ, ಅವರ ಪುತ್ರ ಕೌಶಿಕ್ ರೈ ತೋಟ, ಪುತ್ರಿ ಶ್ರೀಮತಿ ಸಾತ್ವಿಕಾ ನಿತಿನ್ ರೈ, ಅಳಿಯ ನಿತಿನ್ ರೈ ಕುಕ್ಕುವಳ್ಳಿ, ಹಿರಿಯರಾದ ದಯಾಕರ ರೈ ಕುಂಬ್ರ, ಮಂಜುನಾಥ ರೈ ಕುಂಜಾಡಿ, ಎನ್. ಜಯಪ್ರಕಾಶ್ ರೈ, ಕುಕ್ಕುವಳ್ಳಿ ನಾರಾಯಣ ರೈ, ಎನ್. ವಿಶ್ವನಾಥ ರೈ ಕಳಂಜ, ಕುಂಬ್ರ ವಿಠಲ ಶೆಟ್ಟಿ, ಬಾಲಕೃಷ್ಣ ರೈ ಪಾದೆಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರದೀಪ್ ಕುಮಾರ್ ರೈ ಪನ್ನೆ ಮತ್ತು ಶಿಕ್ಷಕ ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅನ್ನಸಂತರ್ಪಣೆ ನಡೆಯಿತು.