ಕೇರಳದಿಂದ ಸುಳ್ಯಕ್ಕೆ ಪರ್ಮಿಟ್ ಇಲ್ಲದೆ ಕೆಂಪು ಕಲ್ಲು ಸಾಗಾಟ : ಕಂದಾಯ ಅಧಿಕಾರಿಗಳ ತಡೆ – ಲಾರಿ ವಶ

0

ಪರ್ಮಿಟ್ ಇಲ್ಲದೆ ಕೇರಳದಿಂದ ಸುಳ್ಯ‌ ಮತ್ತಿತರ ಭಾಗಕ್ಕೆ ಕೆಂಪು‌ಕಲ್ಲು ಸಾಗಾಟವನ್ನು ಕಂದಾಯ ಅಧಿಕಾರಿಗಳು ತಡೆದು, ಲಾರಿಯನ್ನು ವಶ ಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ.

ಅಜ್ಜಾವರ ಗ್ರಾಮ ಆಡಳಿತಾಧಿಕಾರಿ ಶರತ್ ರವರ ನೇತೃತ್ವದಲ್ಲಿ ಅಜ್ಜಾವರದಲ್ಲಿ ಕೇರಳದಿಂದ ಕಲ್ಲು ಹೇರಿಕೊಂಡು ಬರುತ್ತಿದ್ದ ಲಾರಿಯನ್ನು ತಡೆಯಲಾಗಿರುವುದಾಗಿ ತಿಳಿದು ಬಂದಿದೆ.

ಕಳೆದ ವಾರ ಪರವಾನಿಗೆ ಇಲ್ಲದೆ ಅಜ್ಜಾವರ ಭಾಗದಿಂದ ಕಲ್ಲು ಸಾಗಾಟ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ತಹಶೀಲ್ದಾರ್ ನೇತೃತ್ವದಲ್ಲಿ ಕಲ್ಲುಪಣೆಗಳಿಗೆ ದಾಳಿ ನಡೆಸಿ ಪರಿಕರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.