ಕಂದಡ್ಕ : ಕಾರು ವ್ಯಾನ್ ಅಪಘಾತ

0

ದೊಡ್ಡತೋಟ ಕಡೆಯಿಂದ ಸುಳ್ಯದ ಕಡೆಗೆ ಬರುತ್ತಿದ್ದ ಕಾರು ಮತ್ತು ಸುಳ್ಯದಿಂದ ಗುತ್ತಿಗಾರು ಕಡೆಗೆ ಹೋಗುವ ವ್ಯಾನ್ ನ ಮಧ್ಯೆ ಅಪಘಾತ ನಡೆದ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ.

ಬೆಟ್ಟ ಮರಿಯಪ್ಪ ಭಟ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ಕಂದಡ್ಕದಲ್ಲಿ ಎದುರಿನಿಂದ ಬರುತ್ತಿದ್ದ ‘ಶಾರದಾ’ ವ್ಯಾನಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಚಾಲಕ ಗಾಯಗೊಂಡಿದ್ದು, ಕಾರು ಮತ್ತು ವ್ಯಾನ್ ಜಖಂ ಗೊಂಡಿರುವುದಾಗಿ ತಿಳಿದು ಬಂದಿದೆ.