ಸುಳ್ಯದ ಪ್ರತಿಭೆ ಶುಭದಾ ಆರ್ ಪ್ರಕಾಶ್ ಹಾಡಿರುವ ಕನ್ನಡ ಭಕ್ತಿಗೀತೆಗಳ ಆಲ್ಬಂ ಸಾಂಗ್ ಬಿಡುಗಡೆ

0

ಸುಳ್ಯದ ಗಾನ ಪ್ರತಿಭೆ ಶುಭದಾ ಆರ್ ಪ್ರಕಾಶ್ ಹಾಡಿರುವ ಆಲ್ಬಮ್ ಸಾಂಗ್ ಬಿಡುಗಡೆಯಾಗಿದೆ. ಬಿ.ಸಿ ರೋಡ್ ನಲ್ಲಿ ಈ ಆಲ್ಬಂ ಸಾಂಗ್ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.ಮಾಣಿಕ್ಯದಂಗಣ ಪ್ರೋಡಕ್ಷನ್ ನಲ್ಲಿ ಈ ಆಲ್ಬಂ ತೆರೆಕಂಡಿದೆ ನಮೋ ನಮೋ ಶಂಕರ ಎನ್ನುವ ಕನ್ನಡ ಭಕ್ತಿಗೀತೆ ರಾಜ್ ಕ್ರಿಯೇಷನ್ಸ್ ಯೂಟ್ಯೂಬ್ ಮೂಲಕ ಹೊರ ಹೊಮ್ಮಿದೆ. ಈ ಹಾಡಿನ ನಿರ್ಮಾಣ ರಾಜೇಶ್ ಬಿ ಸಿ ರೋಡ್ ಹಾಗೂ ಸಾಹಿತ್ಯ ರೇಣುಕಾ ಕಾಣಿಯೂರು, ರಾಗ ಸಂಯೋಜನೆ ಅಜಯ್ ರಾಜ್ ಶೆಟ್ಟಿ, ಸಂಗೀತವನ್ನು ಅಶ್ವಿನ್ ಪುತ್ತೂರು ನೀಡಿದ್ದು ,ಕ್ಯಾಡ್ ಮೀಡಿಯಾದಲ್ಲಿ ಧ್ವನಿ ಮುದ್ರಣಗೊಂಡು, ಮನೀಶ್ ಚಾಯಾಗ್ರಹಣ ಮಾಡಿದ್ದಾರೆ. ಪ್ರಚಾರ ಮತ್ತು ಸಹಕಾರವನ್ನು ಸಂತೋಷ್ , ಚಂದ್ರಶೇಖರ್ ಬಿ ಸಿ ರೋಡ್ ಮತ್ತು ನಾಗೇಶ್ ಬೆಳ್ಳಾರೆ ಮಾಡಿದ್ದಾರೆ.


ಅತ್ಯುತ್ತಮ ಗಾಯಕಿಯಾಗಿರುವ ಶುಭದಾ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಧವಿ ವಿದ್ಯಾಬ್ಯಾಸ ಮಾಡುತ್ತಿದ್ದು, ಜೀ ಕನ್ನಡದ ಮೂಲಕ ಸಂಗೀತ ಪ್ರಪಂಚಕ್ಕೆ ಕಾಲಿರಿಸಿದ ಈಕೆ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಳು.ಕಳೆದವರ್ಷ ಹೈದರಾಭಾದ್ ನಲ್ಲಿ ನಡೆದ ಸಂಗೀತ ಷೋ ಒಂದರಲ್ಲಿ ಮಿಂಚಿದ್ದ ಈಕೆಗೆ ಜ್ಯೂನಿಯರ್ ಮಂಗ್ಲಿ ಖ್ಯಾತಿ ದೊರೆತಿತ್ತು, ಹಿರಿಯ ಗಾಯಕಿ ಜಯಶ್ರೀ ಧ್ವನಿಯ ತದ್ರೂಪು ಆಗಿರುವ ಈಕೆ ಧ್ವನಿ ಸಂಗೀತಾಸಕ್ತರ ಮನ ಗೆದ್ದಿದೆ.ಹಲವು ಪ್ರಶಸ್ತಿ ಹಾಗೂ ಪುರಸ್ಕಾರ ಪಡೆದಿರುವ ಈಕೆ ಸುಳ್ಯ ಸೂರ್ತಿಲದಲ್ಲಿ ವಾಸವಿರುವ ಸಿ.ಪಿ.ರವಿಪ್ರಕಾಶ್ ಹಾಗೂ ಜಯಶ್ರೀ ದಂಪತಿಗಳ ಪುತ್ರಿ.