ಸಂಪಾಜೆ ಸಹಕಾರಿ ಸಂಘದ ಶತಮಾನೋತ್ಸವ ಸಂಭ್ರಮ,ಕ್ರೀಡಾಕೂಟದ ಆಮಂತ್ರಣ ಬಿಡುಗಡೆ

0


ಜನವರಿ 1, 2 ಹಾಗೂ 8 ರಂದು ಜರುಗಲಿರುವ ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಶತ ಸಂಭ್ರಮ ಕ್ರೀಡಾಕೂಟದ ಆಮಂತ್ರಣ ಪತ್ರಿಕೆಯನ್ನು ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆಯವರು ಬಿಡುಗಡೆಗೊಳಿಸಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಕುಂಞ ಗೂನಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಜೈನ್, ನಿರ್ದೇಶಕರುಗಳಾದ ಬಿ.ಎಸ್.ಯಮುನಾ, ಜಗದೀಶ್ ರೈ, ಎಚ್.ಎ.ಹಮೀದ್, ರಾಜೀವಿ, ಕೆ.ಪಿ.ಪ್ರಕಾಶ್, ಶತಮಾನೋತ್ಸವ ಸಮಿತಿಯ ಖಜಾಂಜಿ ಜಿ.ರಾಮಚಂದ್ರ, ಸನ್ಮಾನ ಸಮಿತಿಯ ಸಂಚಾಲಕರಾದ ದಾಮೋದರ ಮಾಸ್ತರ್, ಸಾಂಸ್ಕ್ರತಿಕ ಸಮಿತಿಯ ಸಂಚಾಲಕರಾದ ಜಯಾನಂದ ಸಂಪಾಜೆ, ಕಾರ್ಯಕ್ರಮ ನಿರೂಪಣಾ ಸಮಿತಿಯ ಸಂಚಾಲಕರಾದ ಚಿದಾನಂದ ಮಾಸ್ತರ್, ಸಮಿತಿಯ ಪದಾಧಿಕಾರಿಗಳಾದ ಶೌವಾದ್ ಗೂನಡ್ಕ, ಪಿ.ಆರ್.ನಾಗೇಶ್, ಕೇಶವ ಬಂಗ್ಲೆಗುಡ್ಡೆ, ಜಯರಾಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.