ಸುಳ್ಯದಲ್ಲಿ ಕೃಷಿ‌ ಮೇಳ ಆರಂಭ, ಗೋಪೂಜೆಯೊಂದಿಗೆ ಅದ್ದೂರಿ ಉತ್ಸವಕ್ಕೆ ಚಾಲನೆ

0

ಸುಳ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಕೃಷಿ ಮೇಳಕ್ಕೆ ಅದ್ದೂರಿ ಚಾಲನೆ ದೊರೆತಿದೆ.

ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆಯುವ ಕೃಷಿ ಹಬ್ಬದ ಆರಂಭೋತ್ಸವದಲ್ಲಿ ಗೋಪೂಜೆ ನಡೆಸುವುದರ ಮೂಲಕ ಮಾಣಿಲ ಶ್ರೀಧಾಮ ಕ್ಷೇತ್ರದ ಮೋಹನ ದಾಸ ಪರಮಹಂಸ ಸ್ವಾಮೀಜಿಯವರು ಚಾಲನೆ ನೀಡಿದರು.

ಸಚಿವ ಎಸ್.ಅಂಗಾರ ಧ್ವಜಾರೋಹಣಗೈದು, ತೋಟಗಾರಿಕಾ ಇಲಾಖಾ ಮಳಿಗೆ ಉದ್ಘಾಟಿಸಿದರು. ಬಳಿಕ ಎಲ್ಲ ಮಳಿಗೆಗಳಿಗೆ ಚಾಲನೆ ನೀಡಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಮೀನುಗಾರಿಕಾ ನಿಗಮಾಧ್ಯಕ್ಷ ಎ
ವಿ. ತೀರ್ಥರಾಮ, ಪದ್ಮಶ್ರೀ ಪುರಸ್ಕೃತ ಅಮೈ‌ ಮಹಾಲಿಂಗ ನಾಯ್ಕ್, ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್. ಮುಖ್ಯ ಅತಿಥಿಗಳಾಗಿದ್ದರು.

ಕೃಷಿ ಮೇಳದ ವಿವಿಧ ಸಮಿತಿ ಸಂಚಾಲಕರುಗಳಾದ ಡಾ. ಎನ್.ಎ.ಜ್ಞಾನೇಶ್, ಸಂತೋಷ್ ಜಾಕೆ, ಸಂತೋಷ್ ಕುತ್ತಮೊಟ್ಟೆ, ಹರೀಶ್ ರೈ ಉಬರಡ್ಕ, ಪ್ರಧಾನ ಕಾರ್ಯದರ್ಶಿ ವೀರಪ್ಪ ಗೌಡ ಕಣ್ಕಲ್ ವೇದಿಕೆಯಲ್ಲಿ ಇದ್ದರು.

ಕೃಷಿ ಮೇಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ.ಆರ್. ಪ್ರಸಾದ್ ಪ್ರಾಸ್ತಾವಿಕ ವಾಗಿ ಮಾತನಾಡಿದರು.