ದೇವರಕಾನ ಶಾಲೆಯಲ್ಲಿ ಪ್ರತಿಭಾ ದಿನಾಚರಣೆ – ಸನ್ಮಾನ, ಮನರಂಜಿಸಿದ ಸಾಂಸ್ಕೃತಿಕ ವೈಭವ

0

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ದೇವರಕಾನದಲ್ಲಿ ಪ್ರತಿಭಾ ದಿನಾಚರಣೆ ,ಸನ್ಮಾನ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಡಿ.14ರಂದು ನಡೆಯಿತು.


ಬಂದರು ,ಒಳನಾಡು ಸಾರಿಗೆ ಸಚಿವರಾದ ಎಸ್.ಅಂಗಾರರವರು ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.


ಕಲ್ಲೋಣಿ ದೇವರಕಾನ ರಸ್ತೆಗೆ ರೂ.1 ಕೋಟಿ ಅನುದಾನ ಒದಗಿಸಿದ ಹಾಗೂ ಕುಳ್ಳಂಪಾಡಿ ರಸ್ತೆ ಅಭಿವೃದ್ಧಿಗೆ 25 ಲಕ್ಷ ಹಾಗೂ ದೇವರಕಾನ ರಸ್ತೆಗೆ 20 ಲಕ್ಷ ಹೆಚ್ಚುವರಿ ಅನುದಾನ ಒದಗಿಸುವ ಭರವಸೆ ನೀಡಿದ ಸಚಿವ ಎಸ್.ಅಂಗಾರರವರನ್ನು ಹಾಗೂ ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮರವನ್ನು ಶಾಲು ಹೊದಿಸಿ ಫಲ,ಪುಷ್ಪ,ಸ್ಮರಣಿಕೆ ನೀಡಿ ಶಾಲಾ ಎಸ್.ಡಿ.ಎಂ.ಸಿ ಹಾಗೂ ಊರವರಿಂದ ಸನ್ಮಾನಿಸಲಾಯಿತು.


ವೇದಿಕೆಯಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ಗ್ರಾ.ಪಂ.ಸದಸ್ಯರಾದ ಶ್ರೀಮತಿ ಶಶಿಕಲಾ ಕುಳ್ಳಂಪಾಡಿ, ಎಸ್.ಡಿ.ಎಂ.ಸಿ.ಅಧ್ಯಕ್ಷ ನವೀನ ಕುಮಾರ್ ಸಾರಕರೆ,ಉಪಾಧ್ಯಕ್ಷೆ ಮಮತಾ ಎಡಮಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಎಸ್.ಪಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶೀತಲ್ ಯು.ಕೆ, ಶಿಕ್ಷಣ ಸಂಯೋಜಕ ವಸಂತ ಏನೆಕಲ್ಲು, ಕೇಂದ್ರ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಅನುರಾಧ ಎ.ಆರ್ ಉಪಸ್ಥಿತರಿದ್ದರು.
ಗೌರವ ಉಪಸ್ಥಿತರಾಗಿ ದೇವರಕಾನ ಗೆಳೆಯರ ಬಳಗದ ಅಧ್ಯಕ್ಷ ಮೋಕ್ಷಿತ್ ಎಡಮಲೆ, ಶಾಲಾಭಿಮಾನಿಗಳಾದ ನೂಜಾಲು ಪದ್ಮನಾಭ ಗೌಡ, ಬರೆಮೇಲು ಕರುಣಾಕರ ಗೌಡ, ಎಡಮಲೆ ಇರ್ವೆರ್ ಉಳ್ಳಾಕುಲು ದೈವಸ್ಥಾನದ ಮೊಕ್ತೇಸರ ಎಲ್ಯಣ್ಣ ಗೌಡ ಕುಳ್ಳಂಪಾಡಿ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ
ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸಿ.ಆರ್.ಪಿ ಯಾಗಿ ಪದೋನ್ನತಿ ಹೊಂದಿ ಕೇಂದ್ರ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಅನುರಾಧ ಎ.ಆರ್.,ಎಸ್.ಡಿ.ಎಂ.ಸಿ.ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಜತ್ತಪ್ಪ ಗೌಡರವರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.


ಎಸ್.ಡಿ.ಎಂ.ಸಿ.ಅಧ್ಯಕ್ಷ ನವೀನ್ ಕುಮಾರ್ ಸಾರಕರೆ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು.
ಅಜಿತ್ ಐವರ್ನಾಡು ಕಾರ್ಯಕ್ರಮ ನಿರೂಪಿಸಿ,ಶಿಕ್ಷಕಿ ಪ್ರಮೀಳಾ ವಂದಿಸಿದರು.


ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ
ರಾತ್ರಿ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು.ತುಳು ನಾಟಕ ಪ್ರದರ್ಶನ ” ಶಿವದೂತೆ ಗುಳಿಗೆ” ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರನ್ನು ಮನರಂಜಿಸಿತ್ತು.