ಮರ್ಕಂಜ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅಡಿಕೆ ಹಳದಿ ರೋಗ ಪೀಡಿತ ನೊಂದ ಕೃಷಿಕರಿಗೆ ಪರಿಹಾರ ಕೋರಿ ಸಭೆ

0

ಸುಳ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ‘ರಿ’ ವತಿಯಿಂದ ‘ಕೃಷಿಕರಿಗೆ ಮಾರಕವಾಗಿರುವ ಅಡಿಕೆ ಹಳದಿ ರೋಗ ಪಿಡಿತ ನೊಂದ ಕೃಷಿಕರ ಪರಿಹಾರಕ್ಕಾಗಿ ಆಗ್ರಹಿಸುವ ಸಭೆಯನ್ನು ಮರ್ಕಂಜ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಸಲಾಯಿತು.


ಈ ಸಭೆಯಲ್ಲಿ ಕಳೆದ 30 ವರ್ಷಗಳಿಂದ ಜಿಲ್ಲೆಯ ಮೂಲ ಬೆಳೆಯಾದ ಅಡಿಕೆ ಕೃಷಿಗೆ ತಟ್ಟಿರುವ ಹಳದಿ ರೋಗದ ಬಗ್ಗೆ ಮತ್ತು ಇದಕ್ಕೆ ಸಂಬಂಧಿಸಿದ ಕೃಷಿಕರು ಸಾಲದ ಬಾಧೆಗಳಲ್ಲಿ ಸಿಲುಕಿ ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಚರ್ಚೆಗಳನ್ನು ನಡೆಸಲಾಹಿತು.ಸರಕಾರದ ವತಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಸಿಗಬೇಕಾದ ಪರಿಹಾರವನ್ನು ಪಡೆದುಕೊಳ್ಳಲು ಒಗ್ಗಟ್ಟಾಗಿ ಮನವಿಯನ್ನು ಮಾಡಲು ಸಭೆಯಲ್ಲಿ ತೀರ್ಮಾನಿಸಿ
ಈ ವಿಷಯಗಳ ಕುರಿತು ಈಗಾಗಲೇ ರಾಜಶ್ರೀ ಡಾl ವೀರೇಂದ್ರ ಹೆಗ್ಡೆಯವರ ಗಮನಕ್ಕೆ ನೀಡಿ ಮತ್ತು ಕೃಷಿಕರ ಸಂಘಟಿತ ಹೋರಾಟಕ್ಕಾಗಿ ಬೆಂಬಲವನ್ನು ಕೋರಿ ಮನವಿದ್ದು ಇದಕ್ಕೆ ಸ್ಪಂದಿಸಿರುವ ಶ್ರೀಗಳು ತಮ್ಮ ಸಂಪೂರ್ಣ ಸಹಕಾರವನ್ನು ನೀಡಿರುವುದರಿಂದ ಅವರ ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಾವು ಸಂಘಟಿತವಾಗಿ ನಮ್ಮ ಕೂಗನ್ನು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಡುವ ಬಗ್ಗೆ ತೀರ್ಮಾನವನ್ನು ಕೈಗೊಂಡಿದ್ದಾರೆ.
ಈಗಾಗಲೇ ತಾಲೂಕಿನ ಕೊಡಗು ಸಂಪಾಜೆಯಿಂದ ಆರಂಭವಾಗಿ ದಕ್ಷಿಣ ಕನ್ನಡ ಸಂಪಾಜೆ, ಅರಂತೋಡು ತೊಡಿಕ್ಕಾನ, ಮರ್ಕಂಜ, ಈ ಭಾಗಗಳಲ್ಲಿ ಅಡಿಕೆ ಕೃಷಿಗಳು ಸಂಪೂರ್ಣವಾಗಿ ನಾಶವಾಗಿ ಇದೀಗ ರೋಗವು ವಿಸ್ತರಿಸುತ್ತಾ ಪೂರ್ವ ಭಾಗದ ಮಡಪ್ಪಾಡಿ, ಗುತ್ತಿಗಾರು,ಎಲಿಮಲೆ ಕಡೆಗೂ ವಿಸ್ತರಿಸಿ ಆಲಟ್ಟಿ,ಅಜ್ಜಾವರ, ಕಲ್ಲಪಳ್ಳಿ, ಜಾಲ್ಸೂರು, ಕನಕಮಜಲು ಸೋಣಂಗೇರಿ ಭಾಗವಾಗಿ ಹಳದಿ ರೋಗ ಹರಡುತ್ತಾ ಸಂಪೂರ್ಣ ಅಡಿಕೆ ಕೃಷಿ ವಿನಾಶದತ್ತ ಸಾಗುತ್ತಿದ್ದು
ಈ ಸಂಬಂಧ ಸರ್ಕಾರದ ಜನಪ್ರತಿನಿಧಿಗಳನ್ನು, ಸಂಬಂಧಪಟ್ಟ ಇಲಾಖೆಗಳನ್ನು, ರಾಜ್ಯದಿಂದ ಹಿಡಿದು ಕೇಂದ್ರ ಸರ್ಕಾರದವರೆಗೆ ಕೃಷಿಕರ ಅಹವಾಲುಗಳನ್ನು ತಿಳಿಸಿರುತ್ತೇವೆ.

ಆದ್ದರಿಂದ ಈಗಾಗಲೇ ಈ ರೋಗಕ್ಕೆ ತುತ್ತಾಗಿ ಕೃಷಿಯನ್ನು ಕಳೆದುಕೊಂಡ ರೈತರಿಗೆ ಒಂದು ಎಕ್ಕರೆಗೆ 5 ಲಕ್ಷ ರೂಪಾಯಿಯಂತೆ ಪರಿಹಾರ, ರೈತರು ಮಾಡಿರುವ ಸಾಲದ ಬಡ್ಡಿಯನ್ನು ಹತ್ತು ವರ್ಷಗಳ ಕಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಆದ್ದರಿಂದ ಅದಷ್ಟು ಶೀಘ್ರದಲ್ಲಿ ಸಂಬಂಧಪಟ್ಟವರು ರೈತರ ಕಷ್ಟಗಳಿಗೆ ಸ್ಪಂದಿಸಲೇಬೇಕೆಂದು ಈ ಸಭೆಯಲ್ಲಿ ಆಗ್ರಹಿಸಲಾಯಿತು ಎಂದು ತಿಳಿದುಬಂದಿದೆ.
ಸಭಾ ವೇದಿಕೆಯಲ್ಲಿ ಮುಖಂಡರುಗಳಾದ ಎನ್ ಎ ರಾಮಚಂದ್ರ, ಭವಾನಿ ಶಂಕರ್ ಅಡ್ತಲೆ, ಎಂ ವೆಂಕಪ್ಪ ಗೌಡ, ಯೋಜನಾಧಿಕಾರಿ ನಾಗೇಶ್, ದೀಪಕ್ ಕುತ್ತಮಟ್ಟೆ,ಮರ್ಕಂಜ ಒಕ್ಕೂಟದ ಅಧ್ಯಕ್ಷ ಗೋಪಾಲಕೃಷ್ಣ, ಶ್ರೀಮತಿ ರೋಹಿಣಿ ಸೇವಾ ನಿರತರು, ಮನಮೋಹನ, ಪದ್ಮನಾಭ ಶೆಟ್ಟಿ, ಮಾದವ ಗೌಡ, ಹಲವಾರು ಮುಖಂಡರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಥಳೀಯ ನೂರಾರು ಕೃಷಿಕರು ಸಭೆಯಲ್ಲಿ ಭಾಗವಹಿಸಿ ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.