ಪೆರಾಜೆ : ಕೆಂಚುರಾಯನ ಪೂಜೆ ಮತ್ತು ಶ್ರೀ ಧರ್ಮ ದೈವಗಳ ನಡಾವಳಿ

0

ಪೆರಾಜೆ ಗ್ರಾಮದ ನಿಡ್ಯಮಲೆ ಕುಟುಂಬಸ್ಥರ ಮನೆಯಲ್ಲಿ ಕೆಂಚುರಾಯನ ಪೂಜೆ ಮತ್ತು ಶ್ರೀ ಧರ್ಮ ದೈವಗಳ ನಡಾವಳಿ ಡಿ.19 ಮತ್ತು 20 ರಂದು ನಡೆಯಿತು.


ಡಿ.19 ರಂದು ಬೆಳಿಗ್ಗೆ ಶ್ರೀ ವೆಂಕಟರಮಣ ದೇವರ ಹರಿಪೂಜೆ ಮತ್ತು ಸಂಜೆ ಕೆಂಚುರಾಯನ ಪೂಜೆ ನಡೆಯಿತು. ಡಿ.20 ರಂದು ಬೆಳಿಗ್ಗೆ ಗುರುಕಾರ್ನೂರು, ಪೊಟ್ಟದೈವ, ಪಂಜುರ್ಲಿ ದೈವ, ಶ್ರೀ ವಿಷ್ಣುಮೂರ್ತಿ ಮತ್ತು ಧರ್ಮದೈವಗಳ ನಡಾವಳಿ ನಡೆಯಿತು.
ಈ ಸಂದರ್ಭದಲ್ಲಿ ಕುಟುಂಬಸ್ಥರು, ಊರವರು ಉಪಸ್ಥಿತರಿದ್ದರು.