ನಿಂತಿಕಲ್ಲು: ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ

0

ಎನ್ ಆಫ್ ಸಿ ಫ್ರೆಂಡ್ಸ್ ಕ್ಲಬ್ ನಿಂತಿಕಲ್ಲು ಇದರ ಆಶ್ರಯದಲ್ಲಿ ಐದು ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಡಿ.೧೧ ರಂದು ಕೆಎಸ್ ಗೌಡ ನಿಂತಿಕಲ್ಲು ಕ್ರೀಡಾಂಗಣದಲ್ಲಿ ನಡೆಯಿತು.
ರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಸರಸ್ವತಿ ಕಾಮತ್ ರವರು ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಆದಿ ಗರಡಿ ಎಣ್ನೂರು ಕಟ್ಟಬೀಡು ಅನುವಂಶಿಕ ಆಡಳಿತದಾರರಾದ ಕೆ.ರಾಮಕೃಷ್ಣ ಶೆಟ್ಟಿ ಕಟ್ಟಬೀಡು, ಸೀತಾರಾಮಂಜನೇಯ ಭಾರತಿ ಭಜನಾ ಮಂದಿರ ಕೋಟಿ ಚೆನ್ನಯ್ಯ ಸಂಚಾಲಕರಾದ ರಘುನಾಥ ರೈ ಅಲೆಂಗಾರ, ಸುಳ್ಯ ತಾ.ಪಂ. ಮಾಜಿ ಸದಸ್ಯರಾದ ಅಬ್ದುಲ್ ಗಫೂರ್ ಕಲ್ಮಡ್ಕ, ಎಣ್ಮೂರು ಗ್ರಾ.ಪಂ. ಸದಸ್ಯರಾದ ಮಾಯಿಲಪ್ಪ ಗೌಡ, ಗ್ರಾ.ಪಂ. ಸದಸ್ಯೆಯಾದ ದಿವ್ಯಾ ಯೋಗಾನಂದ, ಪ್ರಗತಿಪರ ಕೃಷಿಕರಾದ ರಮೇಶ್ ಕೋಟೆ, ಮಾಜಿ ಭೂ ನ್ಯಾಯ ಮಂಡಳಿ ಸದಸ್ಯರಾದ ಲೋಕನಾಥ ರೈ, ಉದ್ಯಮಿಗಳಾದ ಕಜೆ ಇಬ್ರಾಹಿಂ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶರೀಫ್ ಗುತ್ತಿಗೆ, ಸಮಾಜಿಕ ಕಾರ್ಯಕರ್ತ ಮಹಮ್ಮದ್ ವೈ ಭಾಗವಹಿಸಿ ಶುಭ ಹಾರೈಸಿದರು.

ಸಮಾರೋಪ ಸಮಾರಂಭದಲ್ಲಿ ಕೆ.ಪಿಸಿ.ಸಿ ಸಂಯೋಜಕರಾದ ನಂದಕುಮಾರ್, ಕಡಬ ಬ್ಲಾಕ್ ಅಧ್ಯಕ್ಷರಾದ ಸುಧೀರ್ ರೈ , ಯವ ಕಾಂಗ್ರೆಸ್ ಅಧ್ಯಕ್ಷರಾದ ಅಭಿಲಾಶ್, ಎಡಮಂಗಳ ಗ್ರಾ.ಪಂ ಉಪಾಧ್ಯಕ್ಷೆಯಾದ ಶ್ರೀಮತಿ ರೇವತಿ. ಕೆ, ಕಲ್ಮಡ್ಕ ಗ್ರಾ.ಪಂ ಸದಸ್ಯರಾದ ಲೋಕೇಶ್ ಆಕ್ರಿಕಟ್ಟೆ, ಜಿಲ್ಲಾ ಯವ ಕಾಂಗ್ರೆಸ್ ಕಾರ್ಯದರ್ಶಿಯಾದ ಫೈಸಲ್ ಕಡಬ, ಕಡಬ ಬ್ಲಾಕ್ ಕಾರ್ಯದರ್ಶಿಯಾದ ಸತೀಶ್ ನಾಯಕ್ ಭೂಮಿಕಾ ಉದ್ಯಮಿಗಳಾದ ಬಾಲಕೃಷ್ಣ ರೈ ,ವಿನಯ ಚಂದ್ರ ಹೆದ್ದಾರಿ ಆಗಮಿಸಿ ಶುಭ ಹಾರೈಸಿದರು.
ಪಂದ್ಯಕೂಟದಲ್ಲಿ ಪ್ರಥಮ ಫ್ರೆಂಡ್ಸ್ ಅಲೆಕ್ಕಾಡಿ ತಂಡ, ದ್ವೀತಿಯ ಎನ್.ಎಪ್.ಸಿ ಎಣ್ಮೂರು ತಂಡ ಪಡೆದುಕೊಂಡರು.