ಕೊಡಿಯಾಲ ಗ್ರಾಮ ಪಂಚಾಯತ್ ನಲ್ಲಿ ಉಚಿತ ಕಣ್ಣಿನ ತಪಾಸಣೆ

0

ಕೊಡಿಯಾಲ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯತ್ ಮತ್ತು ಐ ಮಿತ್ರ 2.5 NVG ಸಹಯೋಗದಲ್ಲಿ ಕಣ್ಣಿನ ಉಚಿತ ತಪಾಸಣೆ , ಕಣ್ಣಿನ ಪೊರೆ ಚಿಕಿತ್ಸೆ ಯ ಬಗ್ಗೆ ಮಾಹಿತಿ, ನೇತ್ರದಾನದ ಬಗ್ಗೆ ಮಾಹಿತಿ , ಸಮೀಪ ದೃಷ್ಠಿ ದೋಷ ಇರುವವರಿಗೆ ಉಚಿತ ಕನ್ನಡಕ ವಿತರಣೆ , ದೂರದೃಷ್ಟಿ ದೋಷ ಇರುವ ಶಾಲಾ ಮಕ್ಕಳಿಗೆ ಉಚಿತ ಕನ್ನಡಕ ವಿತರಣೆ ಡಿ.16 ರಂದು ನಡೆಯಿತು.
ಕಾರ್ಯಕ್ರಮವನ್ನು ಗ್ರಾ.ಪಂ.ಅಧ್ಯಕ್ಷ ಪ್ರದೀಪ್ ರೈ ಅಜ್ರಂಗಳ ಉದ್ಘಾಟಿಸಿದರು. ಐ ಮಿತ್ರ 2.5 NVG ಯ ವೈದ್ಯರು ,ತಾಂತ್ರಿಕ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಪಿ ಡಿ ಒ, ಸಿಬ್ಬಂದಿಗಳು ಉಪಸ್ಥಿತರಿದ್ದರು. ಗ್ರಾಮಸ್ಥರು ಶಿಬಿರದ ಸದುಪಯೋಗ ಪಡೆದುಕೊಂಡರು.