ಹಿಂದೂ ವಿರೋಧಿ ಲೇಖನ ಪ್ರಕಟ ಆರೋಪ: ಎಡಮಂಗಲ ವಿಶ್ವ ಹಿಂದೂ ಪರಿಷತ್ ನಿಂದ ಪೊಲೀಸ್ ದೂರು

0

ಸರಕಾರಿ ಅಧಿಕಾರಿಯಾಗಿರುವ ಸಂಜೀವ ಪೂಜಾರಿಯವರು ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಭಜನೆಯನ್ನು ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಲೇಖನ ಪ್ರಕಟಿಸಿದ್ದಾರೆಂದು ಆರೋಪಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಡಮಂಗಲ ಭಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಸದಸ್ಯರು ಬೆಳ್ಳಾರೆ ಪೊಲೀಸ್ ರಿಗೆ ದೂರು ನೀಡಿದ ಘಟನೆ ಡಿ. 22ರಂದು ನಡೆದಿದೆ.

ಭಜನೆ ಮತ್ತು ಭಜಕರ ವಿರುದ್ಧ ಅಶ್ಲೀಲ ಪದಗಳನ್ನು ಬಳಕೆ ಮಾಡಿ ಬರಹ ಪ್ರಕಟಿಸಿದ್ದು, ಇದು ಹಿಂದುಗಳ ಭಾವನೆಗೆ ಧಕ್ಕೆ ತರುವಂತಾಗಿದೆ‌. ಆದುದರಿಂದ ಸಂಜೀವ ಪೂಜಾರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ. ಭಜರಂಗದಳ ಎಡಮಂಗಲ ಘಟಕದ ಗೌರವಾಧ್ಯಕ್ಷ ಗಿರೀಶ್ ನಡುಬೈಲು, ಪ್ರಖಂಡ ಸಹ ಸಂಯೋಜಕ ಚೇತನ್ ದೋಳ್ತಿಲ, ಸಂಚಾಲಕ ಪ್ರವೀಣ್ ರೈ ಮರ್ಧೂರು, ಎಡಮಂಗಲ ಗ್ರಾ.ಪಂ. ಸದಸ್ಯ
ರಾಮಣ್ಣ ಜಾಲ್ತಾರು, ದುರ್ಗವಾಹಿನಿಪ್ರಮುಖರಾದ
ಹವ್ಯಶ್ರೀ ಮಾಲೆಂಗ್ರಿ, ಮಾತೃ ಶಕ್ತಿ ಪ್ರಮುಖರಾದ ಗೀತಾ ಪ್ರವೀಣ್ ಪರ್ಲ ಸೇರಿದಂತೆ ಕಾರ್ಯ ಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.