ಅಡ್ಕಾರು: ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಗ್ರಾಮ ವಾಸ್ತವ್ಯ, ಸಮುದಾಯ ಸಮ್ಮಿಲನ, ಗ್ರಾಮ ವಾಸ್ತವ್ಯ ಸಮುದಾಯ ಸಮ್ಮಿಲನ ನಮ್ಮೆಲ್ಲರ ಯೋಗ: ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಗ್ರಾಮ ವಾಸ್ತವ್ಯದಿಂದ ಸಮುದಾಯದಲ್ಲಿ ಜಾಗೃತಿ ಮೂಡಿದೆ: ಧರ್ಮಪಾಲನಾಥ ಸ್ವಾಮೀಜಿ

0

“ಮೂರು ದಿನಗಳ ಕಾಲ ಈ ಭಾಗದಲ್ಲಿ ನಡೆದಿರುವ ಗ್ರಾಮ ವಾಸ್ತವ್ಯ ಮತ್ತು ಸಮುದಾಯ ಸಮ್ಮಿಲನ ಕಾರ್ಯಕ್ರಮ, ಎಲ್ಲರೂ ಒಟ್ಟಾಗಿ ಬೆರೆತಿರುವುದು ನಮ್ಮೆಲ್ಲರ ಯೋಗ” ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಅವರು ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘ, ತರುಣ ಘಟಕ, ಮಹಿಳಾ ಘಟಕ , ಜಾಲ್ಸೂರು, ಕನಕಮಜಲು, ಮಂಡೆಕೋಲು, ಅಜ್ಜಾವರ , ದೇಲಂಪಾಡಿ, ಸುಳ್ಯ ನಗರ ಮತ್ತು ಉಬರಡ್ಕ ಮಿತ್ತೂರು ಗ್ರಾಮ ಸಮಿತಿಗಳ ಜಂಟಿ ಆಶ್ರಯದಲ್ಲಿ ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ಡಿ.22ರಂದು ಸಂಜೆ ನಡೆದ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ ಸುಳ್ಯ ತಾಲೂಕು ಗ್ರಾಮ ವಾಸ್ತವ್ಯ ಸಮುದಾಯ ಸಮ್ಮಿಲನ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ, ಆಶೀರ್ವಚನ ನೀಡಿದರು.

ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಸಂಚಾಲಕ ಜಾಕೆ ಸದಾನಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಆದಿಚುಂಚನಗಿರಿ ಮಂಗಳೂರಿನ ಕಾವೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಅವರು ಮಾತನಾಡಿ ಪರಮಪೂಜ್ಯ ಸ್ವಾಮೀಜಿಯವರ ಗ್ರಾಮ ವಾಸ್ತವ್ಯದಿಂದ ಸಮುದಾಯದಲ್ಲಿ ಜಾಗೃತಿ ಮೂಡಿದೆ. ಗ್ರಾಮ ಗ್ರಾಮದಲ್ಲಿನ ಜನರು ಭಕ್ತಿ ಶ್ರದ್ಧೆಯಿಂದ ಸ್ವಾಮೀಜಿಯವರಿಗೆ ಗೌರವ ಸಲ್ಲಿಸಿದ್ದಾರೆ. ಇಂತಹ ಸಮುದಾಯ ಸಮ್ಮಿಲನ ಕಾರ್ಯಕ್ರಮಗಳು ಇನ್ನಷ್ಟು ನಡೆಯುವಂತಾಗಲಿ ಎಂದು ಆಶೀರ್ವಚನ ನೀಡಿದರು.


ವೇದಿಕೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ., ಕರ್ನಾಟಕ ಮೀನುಗಾರಿಕಾ ನಿಗಮಾಧ್ಯಕ್ಷ ಎ.ವಿ. ತೀರ್ಥರಾಮ, ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಬು ಕೆ.ಎಂ., ದ.ಕ. ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ., ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆ ಸ್ಥಾಪನಾ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಮಾಜಿ ಜಿ.ಪಂ.‌ಸದಸ್ಯ ಹರೀಶ್ ಕಂಜಿಪಿಲಿ, ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ. ಜಯರಾಮ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಅಡ್ಕಾರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ದೇವಾಲಯದ ಮೊಕ್ತೇಸರ ಗುರುರಾಜ್ ಭಟ್ ಅಡ್ಕಾರು , ಮಂಡೆಕೋಲು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವಿನುತಾ ಪಾತಿಕಲ್ಲು, ಡಾ.ಜ್ಯೋತಿ ಆರ್ ಪ್ರಸಾದ್, ಸಾಮಾಜಿಕ ಮುಂದಾಳು ಭರತ್ ಮುಂಡೋಡಿ ವೇದಿಕೆಯಲ್ಲಿದ್ದರು. ರಜತ್ ಗೌಡ ಮೂರ್ಜೆ ಸ್ವಾಗತಿಸಿ, ಚಂದ್ರಾ ಕೋಲ್ಚಾರ್ ವಂದಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ.ಕಾರ್ಯಕ್ರಮ ನಿರೂಪಿಸಿದರು.


ಬಳಿಕ ಜಾಲ್ಸೂರು , ಕನಕಮಜಲು, ಮಂಡೆಕೋಲು, ಅಜ್ಜಾವರ, ದೇಲಂಪಾಡಿ, ಸುಳ್ಯ ನಗರ, ಉಬರಡ್ಕ ಮಿತ್ತೂರು ಗ್ರಾಮಸಮಿತಿಗಳ ವತಿಯಿಂದ ಪರಮಪೂಜ್ಯ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿವರ ಪಾದಪೂಜೆ ನಡೆಯಿತು.