ಬೆಳ್ಳಾರೆ ಡಿಸಿಸಿ ಬ್ಯಾಂಕಿನಲ್ಲಿ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ

0

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಬೆಳ್ಳಾರೆ ಶಾಖೆಯಲ್ಲಿ ಗ್ರಾಹಕರಿಗೆ ಆರ್ಥಿಕ ಅರಿವು ಕಾರ್ಯಕ್ರಮವು ಡಿ.22 ರಂದು ನಡೆಯಿತು.
ನರಸಿಂಹ ಜೋಶಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.


ಶಾಖಾಧಿಕಾರಿ ಸಂತೋಷ್ ಕುಮಾರ್ ಎಂ.ಗ್ರಾಹಕರಿಗೆ ಆರ್ಥಿಕ ಅರಿವು ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯ ರೈ,ಕಳಂಜ ಬಾಳಿಲ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಮೇಶ್ ಉಪಸ್ಥಿತರಿದ್ದರು.


ಐವರ್ನಾಡು ಸಹಕಾರಿ ಸಂಘದ ಸಿಬ್ಬಂದಿ ಅಜಿತ್ ನಿಡುಬೆ ಕಾರ್ಯಕ್ರಮ ನಿರೂಪಿಸಿ,ಅವಿನಾಶ್ ಸ್ವಾಗತಿಸಿ,ರಮೇಶ್ ಬಲ್ಲಾಲ್ ವಂದಿಸಿದರು.
ಬ್ಯಾಂಕಿನ ಸಿಬ್ಬಂದಿ ವರ್ಗದವರಾದ ಶ್ರೀಮತಿ ಸುರೇಖಾ,ಕು.ದೀಕ್ಷಾ ರೈ,ಪ್ರಸಾದ್ ಕುಮಾರ್,ನವೋದಯ ಪ್ರೇರಕರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.