ಅಡ್ಡ0ತಡ್ಕ ದೇರಣ್ಣ ಗೌಡರ ಮನೆಗೆ ಭೇಟಿ ನೀಡಿ ವಿಶ್ರಾಂತಿ ಪಡೆದು ನಿರ್ಗಮಿಸಿದ ಆದಿಚುಂಚನಗಿರಿ ಮಹಾ ಸ್ವಾಮೀಜಿ

0

ಡಿ. 21 ರಿಂದ 23 ರವರೆಗೆ ಸುಳ್ಯ ತಾಲೂಕಿನ ವಿವಿದೆಡೆ ಧರ್ಮ ಸಂದೇಶ ಹಾಗೂ ಪಾದ ಪೂಜೆಗಳಲ್ಲಿ ಭಾಗಿಯಾದ ಆದಿಚುಂಚನಗಿರಿ ಮಠದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಮತ್ತು ಮಂಗಳೂರು ಶಾಖಾ ಮಠದ ಶ್ರೀ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಡಿ. 22 ರಂದು ಅಡ್ಕರ್ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಧರ್ಮ ಸಂದೇಶ ನೀಡಿ ನಿವೃತ್ತ ಯೋಧ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಅಡ್ಡ0ತಡ್ಕ ದೇರಣ್ಣ
ಗೌಡರ ನಿವಾಸಕ್ಕೆ ಆಗಮಿಸಿ ಕೆಲ ಹೊತ್ತು ವಿಶ್ರಾಂತಿ ಪಡೆದರು.

ದೇರಣ್ಣ ಗೌಡರ ಮನೆಯವರು, ಕುಟುಂಬಸ್ಥರು ಸ್ವಾಮೀಜಿದ್ವಯರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಿದರು.

ಕೆಲ ಹೊತ್ತು ವಿಶ್ರಾಂತಿ ಪಡೆದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ರಾತ್ರಿಯೇ ಆದಿಚುಂಚನಗಿರಿ ಮಠಕ್ಕೆ ನಿರ್ಗಮಿಸಿದರು.