ಎನ್ನೆಂಸಿ: ಇಂಡಿಯನ್ ಸೆಕ್ಯೂರಿಟಿ ಮಾರ್ಕೆಟ್ ಕಾರ್ಯಗಾರ

0
 ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಫಾರಮ್ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್ ವತಿಯಿಂದ ಬಿಬಿಎ ವಿದ್ಯಾರ್ಥಿಗಳಿಗೆ 21-12-2022ರಂದು ಇಂಡಿಯನ್ ಸೆಕ್ಯೂರಿಟಿ ಮಾರ್ಕೆಟ್ ಕಾರ್ಯಗಾರವನ್ನು  ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ‌ ವಹಿಸಿದ್ದರು.  ಕಾಲೇಜಿನ ಶೈಕ್ಷಣಿಕ ಸಲಹೆಗಾರ ಪ್ರೊ. ಬಾಲಚಂದ್ರ ಗೌಡ

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯದ ಮೋತಿಲಾಲ್ ಓಸ್ವಾಲ್ ಫೈನಾನ್ಸಿಯಲ್ ಸರ್ವಿಸ್ ಲಿಮಿಟೆಡ್ ನ ವ್ಯವಹಾರಿಕ ಪಾಲುದಾರ ಮೋಹಿತ್ ಎ ಎಸ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಇಂಡಿಯನ್ ಸೆಕ್ಯೂರಿಟಿ ಮಾರ್ಕೆಟ್ ನ ವಹಿವಾಟು, ಕಾರ್ಯವೈಖರಿ, ಟ್ರೇಡಿಂಗ್ ನ ಏರಿಳಿತಗಳ ಬಗ್ಗೆ ಮಾಹಿತಿಯನ್ನು ನೀಡಿದರು.


ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ಮೋತಿಲಾಲ್ ಓಸ್ವಾಲ್ ಸರ್ವಿಸ್ ಲಿಮಿಟೆಡ್ ನ ಕರೆನ್ಸಿ ಮತ್ತು ಕಮೋಡಿಟಿ ಡೀಲರ್ ಆಗಿರುವ ಲಭ್ ಭಾರದ್ವಾಜ್ ಭಾಗವಹಿಸಿ ಕರೆನ್ಸಿ ಹಾಗೂ ಕಮೋಡಿಟಿ ಮಾರ್ಕೆಟಿನ ಏರಿಳಿತ ಹಾಗೂ ಕರೆನ್ಸಿ ಮಾರುಕಟ್ಟೆಯಲ್ಲಿ ಹೂಡಿಕೆಯ ಬಗ್ಗೆ ಮಾಹಿತಿ‌ ನೀಡಿದರು.


ಫಾರಮ್ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್ ನ ಸಂಚಾಲಕಿ, ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶ್ರೀಮತಿ ಅನಂತಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಂತಿಮ ಬಿಬಿಎ ವಿದ್ಯಾರ್ಥಿಗಳಾದ ಲೇಖನ್ ಕೆ ಹೆಚ್‌ ಸ್ವಾಗತಿಸಿ, ಹರ್ಷತಾ ಎನ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಸ್ನೇಹಿತ್ ಜಿ ಟಿ ವಂದಿಸಿ, ಲಿಖಿತ್ ಎಂ ಎನ್ ಕಾರ್ಯಕ್ರಮ ನಿರೂಪಿಸಿದರು.
ವ್ಯವಹಾರ ಆಡಳಿತ ವಿಭಾಗದ ಉಪನ್ಯಾಸಕರುಗಳಾದ ಹರಿಪ್ರಸಾದ್ ಎ ವಿ, ಶ್ರೀಮತಿ ಲೀನಾ ವೈ ಎನ್ ಹಾಗೂ ಶ್ರೀಮತಿ ಮೀನಾಕ್ಷಿ ಉಪಸ್ಥಿತರಿದ್ದರು.