ಸುಳ್ಯ ಎನ್ನೆoಪಿಯುಸಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಉಪನ್ಯಾಸ

0


ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸುಳ್ಯ ನೆಹರು ಮೆಮೋರಿಯಲ್ ಪ್ರಾoಶುಪಾಲ ಪ್ರೊ ರುದ್ರ ಕುಮಾರ್ ಎಂ ಎಂ ಅಧ್ಯಕ್ಷತೆ ವಹಿಸಿ, ಉಪನ್ಯಾಸ ನೀಡುತ್ತಾ “ರಾಷ್ಟ್ರೀಯ ಶಿಕ್ಷಣ ನೀತಿ”ಯ ಪ್ರಕಾರ ವಿದ್ಯಾರ್ಥಿಗಳು ಪದವಿ ಹಂತವನ್ನು 3ವರ್ಷಗಳ ಕಾಲ ಅಧ್ಯಯನ ಮಾಡಿ ಮುಂದಿನ ಹಂತದ ಶಿಕ್ಷಣಕ್ಕೆ ಹೋಗಲು ಅವಕಾಶವಿದೆ.ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣದಂತೆ ಇಂದು ಪದವಿ ಶಿಕ್ಷಣಕ್ಕೂ ಬೇಡಿಕೆ ಇದೆ ಎಂದರು.


ಮುಖ್ಯ ಅತಿಥಿಗಳಾಗಿ ಪದವಿ ವಿಭಾಗದ ಇತಿಹಾಸ ವಿಭಾಗದ ಮುಖ್ಯಸ್ಥರು,ಎನ್ ಇ ಪಿ ಸಂಯೋಜಕರಾಗಿರುವ ಪ್ರೊ ತಿಪ್ಪೇ ಸ್ವಾಮಿ, ಎನ್ನೆoಸಿಯ ವಿದ್ಯಾರ್ಥಿ ಕ್ಷೇಮಾಧಿಕಾರಿ ರತ್ನಾವತಿ ಡಿ,ಎನ್ನೆoಸಿಯ ಆಂತರಿಕ ಗುಣ ಮಟ್ಟ ಮತ್ತು ಖಾತರಿ ಕೋಶದ ಸಂಯೋಜಕಿ ಪ್ರೊ ಮಮತ ಕೆ, ಪಿಯು ವಿಭಾಗದ ವಿ. ಕ್ಷೇಮಾಧಿಕಾರಿ ಸಾವಿತ್ರಿ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು ಪಿಯು ವಿಭಾಗದ ವಿದ್ಯಾರ್ಥಿಗಳಾದ ಅಭಿಷೇಕ್ ಪ್ರಾರ್ಥಿಸಿ, ಆಜ್ಞಾ ಐಪಾಲ್ ಸ್ವಾಗತಿಸಿದರು ಸುಹಿಬ್ ಸೈಫುದ್ದಿನ್ ವಂದಿಸಿ, ಪೂರ್ವಿ ಕೇಶವ ಮೂರ್ತಿ ನಿರೂಪಿಸಿದರು.