ಅಧಿಕಾರದಿಂದ ದಾರಿ ತಪ್ಪದಂತೆ ಧರ್ಮದ ಚೌಕಟ್ಟು ಬೇಕು: ನಿರ್ಮಲಾನಂದನಾಥ ಸ್ವಾಮೀಜಿ, ಬಂದಡ್ಕದಲ್ಲಿ ಸಮುದಾಯ ಸಮ್ಮಿಲನ, ಅನುಗ್ರಹ ಸಂದೇಶ, ಕೇರಳ ಗಡಿಭಾಗದಲ್ಲಿರುವ ಒಕ್ಕಲಿಗರ ಗಣತಿ ನಡೆಸುವಂತೆ ಸ್ವಾಮೀಜಿ‌ ಸೂಚನೆ

0

ಅಧಿಕಾರದಿಂದ ದಾರಿ ತಪ್ಪದಂತೆ ಮತ್ತು ದಾರಿ ತಪ್ಪಿಸದಂತೆ ಧರ್ಮದ ಚೌಕಟ್ಟು ಅಗತ್ಯ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಪೀಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.

ಕೇರಳ ಗಡಿಭಾಗವಾದ ಬಂದಡ್ಕದ ಕಟ್ಟಕೋಡಿ ಮುತ್ತಯ್ಯ ಮಾಸ್ತರ್ ಮನೆಯಲ್ಲಿ ನಡೆದ ಸಮುದಾಯ ಸಮ್ಮಿಲನ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿದ ಸ್ವಾಮೀಜಿಯವರು, ಗಡಿಭಾಗದಲ್ಲಿ ನೆಲೆಸಿರುವ ಒಕ್ಕಲಿಗ ಜನಾಂಗದ ಗಣತಿ ನಡೆಸುವಂತೆ ಸೂಚಿಸಿದ ಸ್ವಾಮೀಜಿಯವರು, ಹಿಂದುಳಿದ ವರ್ಗಗಳ ಸೌಲಭ್ಯ ದೊರೆಯಬೇಕಾದರೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬೇಕೆಂದರು.

ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಭಜನೆ ಹಾಡಿದರು.

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ., ಜಿಲ್ಲಾ ಒಕ್ಕಲಿಗರ ಸಂಘದ ತರುಣ ಘಟಕದ ಅಧ್ಯಕ್ಷ ಅಕ್ಷಯ್ ಕೆ.ಸಿ. , ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ದ.ಕ. ಕೊಡಗು ಗೌಡ ಅಭಿವೃದ್ಧಿ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಬಂದಡ್ಕ ಸುಬ್ರಹ್ಮಣ್ಯ ದೇಗುಲದ ಮೊಕ್ತೇಸರ ಸದಾನಂದ ರೈ, ಕಾರ್ಯಕ್ರಮದ ವಲಯ ಸಂಚಾಲಕ ಪುರುಷೋತ್ತಮ ಬೊಡ್ಡನಕೊಚ್ಚಿ ಮೊದಲಾದವರು ಉಪಸ್ಥಿತರಿದ್ದರು.