ಕನಕಮಜಲು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಗುಡ್ಡಕ್ಕೆ ಬೆಂಕಿ, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

0

ಕನಕಮಜಲು ಗ್ರಾಮದ ಮಳಿ ರೇಣುಕಾ ಸರ್ಕಲ್ ಬಳಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಗುಡ್ಡಕ್ಕೆ ಬೆಂಕಿ ಹತ್ತಿಕೊಂಡ ಹಾಗೂ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದ ಘಟನೆ ಡಿ.23ರಂದು ಸಂಜೆ ಸಂಭವಿಸಿದೆ.
ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ವಿದ್ಯುತ್ ಲೈನ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಗುಡ್ಡಪ್ರದೇಶಕ್ಕೆ ಬೆಂಕಿ ಹೊತ್ತಿ ಉರಿಯಲಾರಂಬಿಸಿತು. ಕೂಡಲೇ ಗ್ರಾ.ಪಂ. ಸದಸ್ಯ ಇಬ್ರಾಹಿಂ ಕಾಸಿಂ ಸೇರಿದಂತೆ ಸ್ಥಳೀಯರು ಬಂದು ಬೆಂಕಿ ಉರಿಯುತ್ತಿರುವುದನ್ನು ಹತೋಟಿಗೆ ತಂದರೆನ್ನಲಾಗಿದೆ. ಈ ವೇಳೆ ಅಗ್ನಿಶಾಮಕ ದಳಕ್ಕೂ ಫೋನ್ ಮಾಡಿದ ಸಲುವಾಗಿ ಅವರು ಬಂದು ಸಂಪೂರ್ಣ ಬೆಂಕಿ ನಂದಿಸಿದರೆಂದು ತಿಳಿದುಬಂದಿದೆ.