ಸುಳ್ಯ ಮುಖ್ಯ ರಸ್ತೆಯಿಂದ, ಆಲೆಟ್ಟಿ, ಕ್ರಾಸ್ ಬಳಿ ರಸ್ತೆಗೆ ಜೋತುಕೊಂಡಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಲು ರಿಯಾಜ್ ಕಟ್ಟೆಕಾರ್ ‌ಮನವಿ

0

ಸುಳ್ಯ ಮುಖ್ಯ ರಸ್ತೆಯಿಂದ, ಆಲೆಟ್ಟಿ, ಕ್ರಾಸ್ ಬಳಿ ರಸ್ತೆಗೆ ಜೋತುಕೊಂಡಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸುವಂತೆ ಸುಳ್ಯ‌ ನ.ಪಂ. ಸದಸ್ಯ ರಿಯಾಜ್ ಕಟ್ಟೆಕಾರ್ ಮೆಸ್ಕಾಂ ಅಧಿಕಾರಿಗಳಿಗೆ ‌ಮನವಿ ಮಾಡಿಕೊಂಡಿದ್ದಾರೆ.

ಆಲೆಟ್ಟಿ ಕ್ರಾಸ್ ಬಳಿ ವಿದ್ಯುತ್ ಕಂಬ ಇದ್ದು, ವಿದ್ಯುತ್ ತಂತಿಗಳು ರಸ್ತೆಗೆ ಜೋತುಕೊಂಡಿರುತ್ತದೆ.
ಕೇರಳ ಭಾಗಕ್ಕೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ಕೆ ಎಫ್ ಡಿ ಸಿ ರಬ್ಬರ್ ಕಾರ್ಖಾನೆಗೂ ಇದೆ ರಸ್ತೆಯಲ್ಲಿ ಅನೇಕ ಘನ ವಾಹನಗಳು ಸಂಚರಿಸುವುದರಿಂದ ,ಘನ ವಾಹನಗಳಿಗೆ ಜೋತುಕೊಂಡಿರುವ ವಿದ್ಯುತ್ ತಂತಿಗಳು ತಾಗಿ ಹಲವಾರು ಸಲ ಸಂಭವನೀಯ ಅವಘಡ ತಪ್ಪಿರುತ್ತದೆ.
ಆದುದರಿಂದ ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ಈ ಸ್ಥಳದಲ್ಲಿ “ಸ್ಪನ್ ಪೋಲ್” ಕಂಬವನ್ನು ಅಳವಡಿಸಿ ಮುಂದೆ ಆಗುವ ಅವಘಡವನ್ನು ತಪ್ಪಿಸಿ, ಜನರ ಪ್ರಾಣ ಕಾಪಾಡುವಲ್ಲಿ ಶೀಘ್ರ ಸ್ಪಂದಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ.