ಕಾಳು ಮೆಣಸು ಕೀಳುವ ಸಂದರ್ಭ ಆಯತಪ್ಪಿ ಬಿದ್ದು  ವ್ಯಕ್ತಿ ಮೃತ್ಯು

0

ಸುಳ್ಯ ಜಯನಗರ ಕೊಯಿಂಗೋಡಿ – ಕುದ್ಪಾಜೆ ನಿವಾಸಿ ಕೊರಗಪ್ಪ ಗೌಡ (75) ಎಂಬವರು ಮನೆಯ ಜಾಗದಲ್ಲಿ ಕಾಳು ಮೆಣಸು ಕೊಯ್ಯುವಾಗ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.

ಕೊರಗಪ್ಪ ಗೌಡರು ಮಧ್ಯಾಹ್ನ ವೇಳೆಗೆ ಮನೆಯಲ್ಲಿ ಮರವೊಂದಕ್ಕೆ ಏಣಿ ಇರಿಸಿ ಕಾಳು ಮೆಣಸು ಕೊಯ್ಯುವಾಗ ಆಯ ತಪ್ಪಿ ಏಣಿ ಸಮೇತ ಬಿದ್ದರೆನ್ನಲಾಗಿದೆ. ಕೆಲ ಸಮಯದ ಬಳಿಕ ಮನೆಯವರಿಗೆ ವಿಷಯ ಗೊತ್ತಾಗಿ ಅವರನ್ನು‌ ಮನೆಗೆ ಕರೆದುಕೊಂಡು ಬಂದು, ಬಳಿಕ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದರು. ಆ ವೇಳೆಗೆ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

ಮೃತರು ಇಬ್ಬರು ಪತ್ನಿಯರು ಮತ್ತು ಮಕ್ಕಳನ್ನು ಅಗಲಿದ್ದಾರೆ.