ನಿಂತಿಕಲ್ಲಿನಲ್ಲಿ ಪೆಟ್ರೋಲ್ ಬಂಕ್ ಗೆ ಶಿಲಾನ್ಯಾಸ ಕಾರ್ಯಕ್ರಮ

0

ನಿಂತಿಕಲ್ಲು ಶ್ರೀ ವನದುರ್ಗ ಸಾನಿಧ್ಯದ ಬಳಿಯಲ್ಲಿ ಹಿಂದುಸ್ತಾನ್ ಪೆಟ್ರೋಲಿಯಂ ಕಂಪನಿಯವರ ಪೆಟ್ರೋಲ್ ಬಂಕ್ ತೆರೆಯುವ ಸಲುವಾಗಿ ಡಿಸೆಂಬರ್ 19ರಂದು ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಶ್ರೀ ಕೃಷ್ಣ ಉಪಾಧ್ಯಾಯರು ವೈದಿಕ ಕಾರ್ಯಕ್ರಮ ನಡೆಸಿಕೊಟ್ಟರು. ಹಿಂದುಸ್ಥಾನ್ ಕಂಪನಿಯ ಸಂತೋಷ್ ಕೈಕಾರ , ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ವಸಂತ ನಡುಬೈಲು, ಸದಸ್ಯ ರೂಪರಾಜ ರೈ ಕೆ., ಉಮೇಶ್ ರೈ ಮರುವಂಜ, ಅಶೋಕ್ ಕುಮಾರ್ ರೈ ಊರುಸಾಗು, ತಾರನಾಥ ಕರಿಂಬಿಲ, ಮುರುಳ್ಯ ಪಂಚಾಯತ್ ಅಧ್ಯಕ್ಷೆ ಜಾನಕಿ ಮುರುಳ್ಯ, ಭಾಗೀರಥಿ ಮುರುಳ್ಯ, ಪೃಥ್ವಿ ರೈ ಅಲೆಕ್ಕಾಡಿ, ಮೋನಪ್ಪ ಗೌಡ ಆಲೇಕಿ ಉಪಸ್ಥಿತರಿದ್ದರು.