ಎನ್.ಎಂ.ಸಿ ಸುಳ್ಯ: ವೃತ್ತಿಯಲ್ಲಿ ಸಮಗ್ರತಾ ದೃಷ್ಟಿಯ ಪಾತ್ರದ ಬಗ್ಗೆ ಕಾರ್ಯಕ್ರಮ

0


ನೆಹರು ಮೆಮೋರಿಯಲ್ ಕಾಲೇಜಿನ ವಾಣಿಜ್ಯ ವಿಭಾಗ ಮತ್ತು ಅಸೋಷಿಯೇಷನ್ ವತಿಯಿಂದ ವೃತ್ತಿಯಲ್ಲಿ ಸಮಗ್ರತಾ ದೃಷ್ಟಿಯ ಪಾತ್ರದ ಬಗ್ಗೆ ಡಿ. ೨೦ ರಂದು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ.ಎಂ. ವಹಿಸಿದ್ದರು. ಸಂಪನ್ನೂಲ ವ್ಯಕ್ತಿಗಳಾಗಿ ಕಾರ್ಪೋರೇಟ್ & ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಟ್ರೇನರ್ ಆಗಿರುವ ಶ್ರೀಮತಿ ಜಯಶ್ರೀ ಮಂಗಳೂರು, ವೃತ್ತಿಯಲ್ಲಿ ಸಮಗ್ರತಾ ದೃಷ್ಟಿಯ ಪಾತ್ರದ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳು ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥರು ಆಗಿರುವ ಶ್ರೀಮತಿ ರತ್ನಾವತಿ ಡಿ. ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಮರ್ಸ್ ಅಸೋಸಿಯೇಷನ್ ಸಂಚಾಲಕಿಯಾದ ಶ್ರೀಮತಿ ದಿವ್ಯಾ ಟಿ.ಎಸ್, ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕರುಗಳಾದ ಶ್ರೀಧರ್ ವಿ. ಹಾಗೂ ಶ್ರೀಮತಿ ಗೀತಾ ಶೆಣೈ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕೀರ್ತಿ ಆರ್ ಶೇಟ್ ಮತ್ತು ಶ್ರೇಯಶ್ರೀ ಎ.ಎಸ್ ಪ್ರಾರ್ಥಿಸಿದರು. ಸುಹೈಬ ಸ್ವಾಗತಿಸಿ, ಕೀರ್ತನ್ ಡಿ. ವಂದಿಸಿದರು. ಅನ್ವಯ ಕಾರ್ಯಕ್ರಮ ನಿರೂಪಿಸಿದರು.